ಬೆಂಗಳೂರು : ಬೆಂಗಳೂರಲ್ಲಿ ಪ್ರತಿನಿತ್ಯ ಕೊಲೆ, ಸುಲಿಗೆ, ಲೈಂಗಿಕ ದೌರ್ಜನ್ಯ ಸೇರಿ ಹಲವು ಪ್ರಕರಣಗಳು ವರದಿಯಾಗುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿದೆ.
ಇದರ ಬೆನ್ನಲ್ಲೇ ಬೆಂಗಳೂರಿಗೆ ಮತ್ತೊಂದು ಕುಖ್ಯಾತಿ ಬಂದಿದೆ ಎಂದರೆ ತಪ್ಪಾಗಲಾರದು. ಹೌದು. ದಕ್ಷಿಣ ಭಾರತದಲ್ಲಿಯೇ ಬೆಂಗಳೂರು ನಂಬರ್ 1 ಕ್ರೈಂ ಸಿಟಿ ಎಂದು ನಂಬಿಯೋ ಜಾಗತಿಕ ಸಂಸ್ಥೆ ಬಿಡುಗಡೆ ಮಾಡಿದ ವರದಿ ತಿಳಿಸಿದೆ. ಸರ್ಬಿಯಾ ಮೂಲದ ಆನ್ ಲೈನ್ ಡೇಟಾ ಬೇಸ್ ಸಂಸ್ಥೆಯಾದ ನಂಬೀಯೋ ಈ ವರದಿಯನ್ನು ಮಾಡಿದೆ.
ವಿಶ್ವದ 200 ನಗರಗಳಲ್ಲಿ ಬೆಂಗಳೂರು 102 ನೇ ಸ್ಥಾನ ಪಡೆದುಕೊಂಡಿದೆ. ರಾಷ್ಟ್ರ ರಾಜಧಾನಿ ದೆಹಲಿ 70 ನೇ ಸ್ಥಾನ ಪಡೆದುಕೊಂಡರೆ, ನೊಯ್ಡಾ 87 ನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು 102, ಇಂದೋರ್ 136, ಚಂಡೀಗಢ 177, ಪುಣೆ 184 ಸ್ಥಾನ ಪಡೆದುಕೊಂಡಿದೆ.