ಬೆಂಗಳೂರು : ರಾಜ್ಯ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದ್ದು, ನವೋದ್ಯಮ ಉತ್ತೇಜನಕ್ಕೆ ಆರ್ಥಿಕ ನೆರವು ಒದಗಿಸುವ ‘ಎಲಿವೇಟ್’ ಯೋಜನೆಗೆ ನವೆಂಬರ್ 23ರಿಂದ ನೋಂದಣಿ ಆರಂಭವಾಗಲಿದೆ.
ಈ ಕುರಿತು ಮಾಹಿತಿ ನೀಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ , ನವೋದ್ಯಮ ಉತ್ತೇಜನಕ್ಕೆ ಆರ್ಥಿಕ ನೆರವು ಒದಗಿಸುವ ‘ಎಲಿವೇಟ್’ ಯೋಜನೆಗೆ ನವೆಂಬರ್ 23ರಿಂದ ನೋಂದಣಿ ಆರಂಭವಾಗಲಿದ್ದು, 100 ನವೋದ್ಯಮಗಳನ್ನು ಆಯ್ಕೆ ಮಾಡಿ ಆರ್ಥಿಕ ನೆರವು ಒದಗಿಸಲಾಗುವುದು. 50 ಲಕ್ಷ ರೂ. ವರೆಗೆ ಅನುದಾನ ನೀಡಲಾಗುವುದು ಎಂದು ಹೇಳಿದ್ದಾರೆ.
ಎಲಿವೇಟ್ ಯೋಜನೆಗೆ ನವೆಂಬರ್ 23 ರಿಂದ ನೋಂದಣಿ ಆರಂಭವಾಗಲಿದೆ. ನೋಂದಣಿಗೆ 1 ತಿಂಗಳು ಪೂರ್ತಿ 100 ನವೋದ್ಯಮಗಳನ್ನು ಆಯ್ಕೆ ಮಾಡಲಾಗುವುದು, 50 ಲಕ್ಷ ವರೆಗೆ ಅನುದಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.