![](https://kannadadunia.com/wp-content/uploads/2020/12/Vidhan-Soudha-1.jpg)
ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿಯ ಮಹಿಳಾ ಪದವೀಧರರಿಗೆ ಉದ್ಯಮಗಳನ್ನು ಸ್ಥಾಪಿಸಲು ಪೂರಕವಾಗುವಂತೆ ಪ್ರತಿಷ್ಠಿತ ಐ.ಐ.ಎಂ ಬೆಂಗಳೂರು. ಇವರ ಮೂಲಕ ಉದ್ಯಮಶೀಲತಾ ತರಬೇತಿಗಾಗಿ ಅರ್ಜಿಗಳನ್ನು ಇಲಾಖೆಯ ಅಧಿಕೃತ ಜಾಲತಾಣ : www.sw.kar.nic.in ನಲ್ಲಿ ಆನ್‌ಲೈನ್ ಮೂಲಕ ಆಹ್ವಾನಿಸಲಾಗಿದೆ.
ಸಾಮಾನ್ಯ ಅರ್ಹತೆಗಳು
- ಅಭ್ಯರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿದ್ದು, ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
- ಉದ್ಯಮಗಳನ್ನು ಸ್ಥಾಪಿಸುವ ಉದ್ದೇಶವಿರುವವರು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.
- ವಯೋಮಿತಿ ಕನಿಷ್ಠ – 21 ವರ್ಷಗಳು ಗರಿಷ್ಠ – 45 ವರ್ಷಗಳು,
- ತರಬೇತಿಯ ಅವಧಿ – 5 ರಿಂದ 6 ತಿಂಗಳು.
- 8 ದಿನದ ತರಬೇತಿಯು ಐ.ಐ.ಎಂ-ಬೆಂಗಳೂರು ಸಂಸ್ಥೆ ಕ್ಯಾಂಪಸ್‌ನಲ್ಲಿ ಹಾಗೂ MOOC ಮುಖಾಂತರ ನೀಡಲಾಗುವುದು.
- ಐ.ಐ.ಎಂ – ಬೆಂಗಳೂರು ರವರು ನಡೆಸುವ ಸ್ತ್ರೀನಿಂಗ್ ಟೆಸ್ಟ್ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
- ಶೇ. 100 ರಷ್ಟು ಹಾಜರಾತಿ ಕಡ್ಡಾಯ.
- ಸ್ಟ್ರೀನಿಂಗ್ ಟೆಸ್ಟ್ ದಿನಾಂಕ 11.02.2024 ರಂದು ಐ.ಐ.ಎಂ-ಬೆಂಗಳೂರು ಕ್ಯಾಂಪಸ್‌ನಲ್ಲಿ ನಡೆಸಲಾಗುವುದು.
ತರಬೇತಿ ಪಡೆಯಲು ಇಚ್ಚಿಸುವವರು ಆನ್‌ಲೈನ್ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ದಿನಾಂಕ: 17.01.2024 ರಿಂದ ದಿನಾಂಕ: 31.01.2024 ರ ಸಂಜೆ 5 ಗಂಟೆಯ ವರಗೆ ಸಲ್ಲಿಸತಕ್ಕದ್ದು.
ಆನ್‌ಲೈನ್ ಅರ್ಜಿಯು ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ಜಾಲತಾಣ Www.sw.kar.nic.in ನಲ್ಲಿ ಲಭ್ಯವಿರುತ್ತದೆ.