![](https://kannadadunia.com/wp-content/uploads/2024/01/Women.jpg)
ಬೆಂಗಳೂರು : ಪರಿಶಿಷ್ಟ ಜಾತಿಯ ಮಹಿಳಾ ಪದವೀಧರರು ಸ್ವಂತ ಉದ್ಯಮ ಆರಂಭಿಸಲು ಸಹಕಾರಿಗುವಂತೆ ಐಐಎಂ-ಬೆಂಗಳೂರು ಸಂಸ್ಥೆಯ ಮೂಲಕ ನೀಡಲಾಗುವ ʼಉದ್ಯಮಶೀಲತಾ ತರಬೇತಿʼಗೆ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯ ನಂತರ ಉದ್ಯಮ ಆರಂಭಿಸಲು ಸಿದ್ಧರಿರುವ ಆಸಕ್ತ ಪರಿಶಿಷ್ಟ ಜಾತಿಯ ಮಹಿಳೆಯರು ಇದೇ ಜನವರಿ 31ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ : https://swdservices.karnataka.gov.in/
ಐಐಎಂ-ಬಿ ಮೂಲಕ ಉದ್ಯಮಶೀಲತಾ ತರಬೇತಿಗೆ ಅರ್ಜಿ ಆಹ್ವಾನ, ಪರಿಶಿಷ್ಟ ಜಾತಿಯ ಮಹಿಳಾ ಪದವೀಧರರು ಸ್ವಂತ ಉದ್ಯಮ ಆರಂಭಿಸಲು ಸಹಕಾರಿಗುವಂತೆ ಐಐಎಂ-ಬೆಂಗಳೂರು ಸಂಸ್ಥೆಯ ಮೂಲಕ ನೀಡಲಾಗುವ ‘ಉದ್ಯಮಶೀಲತಾ ತರಬೇತಿ’ ಗೆ ಅರ್ಜಿ ಆಹ್ವಾನಿಸಲಾಗಿದೆ.
21 ರಿಂದ 45 ವರ್ಷದೊಳಗಿನ ಪರಿಶಿಷ್ಟ ಜಾತಿಯ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ 5-6 ತಿಂಗಳುಗಳ ಕಾಲ ತರಬೇತಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-01-2024
ವಿಶೇಷ ಸೂಚನೆ :
ಉದ್ದಿಮೆ ಸ್ಥಾಪಿಸುವ ಉದ್ದೇಶ ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಬೇಕು.