ಬೆಂಗಳೂರು : ಕೇಂದ್ರ ಸರ್ಕಾರವು ರಾಜ್ಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಶೀಘ್ರದಲ್ಲಿಯೇ ಕರ್ನಾಟಕಕ್ಕೆ 2 ವಂದೇಭಾರತ್ ರೈಲು ಸಂಚಾರ ಲಭ್ಯವಾಗುವ ಸಾಧ್ಯತೆ ಇದೆ.
ತಿರುವನಂತಪುರದಿಂದ ಮಂಗಳೂರು, ಯಶವಂತಪುರದಿಂದ ಹೈದರಾಬಾದ್ ನ ಕಾಚೇಗುಡ ಸೇರಿದಂತೆ 10 ಹೊಸ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳ ಸಂಚಾರಕ್ಕೆ ಭಾರತೀಯ ರೈಲ್ವೇ ಚಿಂತನೆ ನಡೆಸಿದೆ.
ಕರಾವಳಿ ನಗರ ಮಂಗಳೂರಿಗೆ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಶೀಘ್ರವೇ ಸಂಚಾರ ಶುರುವಾಗಲಿದೆ. ವಂದೇಭಾರತ್ ತಿರುವನಂತಪುರದಿಂದ ಬೆಳಗ್ಗೆ 5.20ಕ್ಕೆ ಹೊರಟು, ಕಾಸರಗೋಡಿಗೆ ಮಧ್ಯಾಹ್ನ 1.20ಕ್ಕೆ ತಲಪುತ್ತದೆ. ಹೊಸ ರೈಲು ಪ್ರತಿದಿನ 1.20ಕ್ಕೆ ಮಂಗಳೂರಿನಿಂದ ಹೊರಡುವಂತೆ ರೈಲ್ವೆ ಇಲಾಖೆ ವೇಳಾಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಲಾಗಿದೆ.