alex Certify GOOD NEWS : ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್ : ಶೇ.50ರ ರಿಯಾಯಿತಿ ದರದಲ್ಲಿ ಕೃಷಿ ಯಂತ್ರೋಪಕರಣ ಲಭ್ಯ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS : ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್ : ಶೇ.50ರ ರಿಯಾಯಿತಿ ದರದಲ್ಲಿ ಕೃಷಿ ಯಂತ್ರೋಪಕರಣ ಲಭ್ಯ.!

ಪ್ರಸಕ್ತ (2024-25) ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ ಕಾರ್ಯಕ್ರಮದಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ.50ರ ರಿಯಾಯಿತಿಯಲ್ಲಿ ಕೃಷಿ ಯಂತ್ರೋಪಕರಣಗಳು ಲಭ್ಯವಿದೆ.

ಆಸಕ್ತ ರೈತರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯೊಂದಿಗೆ ಪಹಣಿ(ಆರ್ಟಿಸಿ), ಆಧಾರ್ ಕಾರ್ಡ್ನ ಜೆರಾಕ್ಸ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್, ಒಂದು ಭಾವಚಿತ್ರ ರೂ.100ರ ಛಾಫಾ ಕಾಗದ ದಾಖಲಾತಿಗಳನ್ನು ಸಲ್ಲಿಸಿ ಇಲಾಖೆಯಲ್ಲಿ ಸಿಗುವ ಕೃಷಿ ಯಂತ್ರೋಪಕರಣಗಳ ಸದುಪಯೋಗ ಪಡೆದುಕೊಳ್ಳಲು ಕೋರಿದೆ.

ಕೃಷಿ ಉಪ ಕರಣಗಳಾದ ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಕಲ್ಟಿವೇಟರ್, ರೋಟವೇಟರ್, ಎಂ.ಬಿ.ಪ್ಲೂ, ಡಿಸ್ಕ್ ಪ್ಲೋ, ಕಳೆಕೊಚ್ಚುವ ಯಂತ್ರ, ಕಳೆ ತೆಗೆಯುವ ಯಂತ್ರ, ಡಿಸೇಲ್ ಪಂಪ್ ಸೆಟ್, ಪವರ್ ಸ್ಪ್ರೇಯರ್, ಮೇವು ಕತ್ತರಿಸುವ ಯಂತ್ರ, ಭತ್ತದ ಒಕ್ಕಣೆ ಯಂತ್ರ, ಭತ್ತ ಕಟಾವು ಯಂತ್ರ, ಮುಸುಕಿನ ಜೋಳ ಒಕ್ಕಣೆ ಯಂತ್ರ, ಕೃಷಿ ಉತ್ಪನ್ನಗಳ ಸಂಸ್ಕರಣೆ ಯಂತ್ರಗಳಾದ, ರಾಗಿ ಕ್ಲೀನಿಂಗ್ ಯಂತ್ರ, ಹಿಟ್ಟು ಮಾಡುವ ಯಂತ್ರ, ಮೆಣಸಿನ ಕಾಯಿ ಪುಡಿ ಮಾಡುವ ಯಂತ್ರ ಹಾಗೂ ವಿವಿಧ ಬಗೆಯ ಎಣ್ಣೆ ಗಾಣಗಳನ್ನು ಶೇ.50 ರ ಸಹಾಯಧನದಲ್ಲಿ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲ್ಲೂಕಿನ ರೈತರು ಪಡೆದುಕೊಳ್ಳುವಂತೆ ಸೋಮವಾರಪೇಟೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ಕೋರಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...