ಬೆಂಗಳೂರು : ರಾಜ್ಯ ಸರ್ಕಾರವು ಗ್ರಾಮೀಣ ಜನತೆಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ 35 ಗ್ರಾಮಪಂಚಾಯಿತಿಗಳ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಸಂಪೂರ್ಣ ಡಿಜಿಟಲ್ ಸಾಕ್ಷರತೆ ಸಾಧಿಸಲು ರಾಜ್ಯ ಸರ್ಕಾರವ ಗುರಿ ಹೊಂದಿದೆ.
ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯು ಗ್ರಾಮಗಳು ಅಭಿವೃದ್ಧಿ ಆಗುವುದರ ಜೊತೆಗೆ ಗ್ರಾಮಸ್ಥರು ನಿತ್ಯದ ಚಟುವಟಿಕೆಗಳಿಗೆ ಡಿಜಿಟಲ್ ಜ್ಞಾನ ಹೊಂದಬೇಕು ಎಂಬ ಉದ್ದೇಶದಿಂದ ಆಯ್ದ 35 ಗ್ರಾಮ ಪಂಚಾಯಿತಿಗಳಲ್ಲಿ ‘ಡಿಜಿಟಲ್ ಸಾಕ್ಷರತೆ’ ತರಬೇತಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ.
ಗ್ರಾಮದ ಪದವೀಧರರನ್ನು ಗುರುತಿಸಿ , ವಾರ್ಡ್ ಹಂತದಲ್ಲಿ ಸ್ವಯಂ ಸೇವಕರನ್ನಾಗಿ ನೇಮಿಸಿಕೊಂಡು ಕಾರ್ಯಕ್ರಮದ ಮಾಹಿತಿ ನೀಡಲಾಗುತ್ತದೆ. ಸ್ವಯಂ ಸೇವಕರು ತಮ್ಮ ಗ್ರಾಮಸ್ಥರಿಗೆ ಡಿಜಿಟಲ್ ತರಬೇತಿ ನೀಡುತ್ತಾರೆ. ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಮಾನಿಟರ್, ಇಂಟರ್ ನೆಟ್ ಸೌಲಭ್ಯವನ್ನು ಗ್ರಂಥಾಲಯಗಳಿಗೆ ಕಲ್ಪಿಸಲಾಗಿದೆ.