ಬೆಂಗಳೂರು : ಪಡಿತರದಾರರಿಗೆ ಸೆಪ್ಟೆಂಬರ್ ತಿಂಗಳಿನಿಂದ 10 ಕೆಜಿ ಅಕ್ಕಿ ವಿತರಣೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಆಂಧ್ರ ಹಾಗೂ ತೆಲಂಗಾಣ ಅಕ್ಕಿ ನೀಡಲು ಮುಂದಾಗಿದೆ, ಒಂದು ವಾರದಲ್ಲಿ ಅಲ್ಲಿನ ಅಧಿಕಾರಿಗಳು ಅಕ್ಕಿ ನೀಡುವ ಬಗ್ಗೆ ನಿರ್ಧಾರ ಪ್ರಕಟಿಸಲಿದ್ದಾರೆ .
ಆಹಾರ ನಿಗಮದ ದರದಲ್ಲಿ ಅಕ್ಕಿ ನೀಡುವಂತೆ ಮನವಿ ಮಾಡಿದ್ದೇವೆ, ಕೆಜಿಗೆ 34 ರೂ ದರದಲ್ಲಿ ಅಕ್ಕಿ ನೀಡುವಂತೆ ಕೇಳಿದ್ದೇವೆ. ಸದ್ಯ, 5 ಕೆಜಿ ಅಕ್ಕಿ ಬದಲಾಗಿ ಜನರಿಗೆ ಹಣ ಹಾಕುತ್ತಿದ್ದೇವೆ, ಸೆಪ್ಟೆಂಬರ್ ತಿಂಗಳಿನಿಂದ 10 ಕೆಜಿ ಅಕ್ಕಿ ವಿತರಣೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದರು.5 ಕೆಜಿ ಅಕ್ಕಿ ಬದಲು ಇದುವರೆಗೆ 1 ಕೋಟಿ ಕುಟುಂಬಕ್ಕೆ 556 ಕೋಟಿ ಹಣ ಜಮಾ ಮಾಡಲಾಗಿದೆ ಎಂದರು.
ಹಾಗೆಯೇ ಹೊಸದಾಗಿ ಪಡಿತರ ಕಾರ್ಡ್ ವಿತರಣೆಗೆ ಸೂಚನೆ ನೀಡಲಾಗಿದೆ . ನೀತಿ ಸಂಹಿತಿ ಜಾರಿ ಹಿನ್ನೆಲೆ ರೇಷನ್ ಕಾರ್ಡ್ ವಿತರಣೆ ಸ್ಥಗಿತವಾಗಿತ್ತು. ಈಗ ಹೊಸ ಪಡಿತರ ಕಾರ್ಡ್ ವಿತರಣೆಗೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಜೊತೆಗೆ ಪಡಿತರಕಾರ್ಡ್ ಗೆ ಕೂಡಹೊಸ ಸದಸ್ಯರ ಹೆಸರು ಸೇರ್ಪಡೆಗೆ ಅವಕಾಶ ನೀಡಲಾಗಿದೆ ಎಂದರು.