ಬೆಂಗಳೂರು : ನೀರಾವರಿ ಪಂಪ್ ಸೆಟ್ ಗಳಿಗೆ `stand-alone /off grid’ ಸೋಲಾರ್ ಪಂಪ್ ಸೆಟ್ ಗಳನ್ನು ಒದಗಿಸುವ ಮೂಲಕ ನೀರಾವರಿ ಪಂಪ್ ಸೆಟ್ ಗಳನ್ನು ಬೆಂಬಲಿಸುವುದು ಮತ್ತು IP set ಫೀಡರ್‌ಗಳನ್ನು ಸೌರೀಕರಣಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅನಧಿಕೃತ ನೀರಾವರಿ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸುವ ಪುಸ್ತಾವನೆಯನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಚರ್ಚೆಯ ನಂತರ, ಈ ಹಿಂದೆ ಅನಧಿಕೃತ ನೀರಾವರಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವ ಪದ್ಧತಿಯನ್ನು ಕೂಡಲೇ ಬದಲಿಸಿ, ಹೊಸದಾಗಿ ಪದ್ಧತಿಯನ್ನು ಜಾರಿಗೆ ತರಲು ಸಚಿವ ಸಂಪುಟವು ತೀರ್ಮಾನಿಸಿತು. ಅದರಂತೆ ಈ ಕೆಳಕಂಡಂತೆ ಆದೇಶಿಸಿದೆ.
ರಾಜ್ಯದಲ್ಲಿ ನೀರಾವರಿ ಪಂಪ್‌ಸೆಟ್‌ಗಳನ್ನು ವಿದ್ಯುತ್ ಜಾಲಕ್ಕೆ ವ್ಯವಸ್ಥಿತವಾಗಿ ಸೇರ್ಪಡೆಗೊಳಿಸಲು ಮತ್ತು ಸೌರ ವಿದ್ಯುತ್ತನ್ನು ಸಮರ್ಪಕವಾಗಿ ಬಳಸಲು stand-alone /off grid ಸೋಲಾರ್ ಪಂಪ್‌ಸೆಟ್‌ಗಳನ್ನು ಹಾಗೂ IP set ಫೀಡರ್‌ಗಳ ಸೌರೀಕರಣವನ್ನು ಅನುಷ್ಠಾನಗೊಳಿಸಿ ರೈತರ ಪಂಪ್‌ಸೆಟ್‌ಗಳಿಗೆ ಹಗಲಿನ ವೇಳೆ ವಿದ್ಯುತ್ ಸೌಕರ್ಯ ಕಲ್ಪಿಸಲು ಕೆಳಕಂಡ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದ.
(1)ವಿದ್ಯುತ್ ಸರಬರಾಜು ಕಂಪನಿಗಳು 2015 ರಿಂದ ಈಚೆಗೆ IP ಸೆಟ್‌ಗಳನ್ನು ಸಕ್ರಮಗೊಳಿಸಿ, ಮೂಲಸೌಕರ್ಯ ರಚಿಸಲು ಕೈಗೊಂಡಿರುವ ಕ್ರಮಕ್ಕಾಗಿ ಘಟನೋತ್ತರ ಅನುಮೋದನೆ ನೀಡಿದೆ.
(2) ವಿದ್ಯುತ್ ಸರಬರಾಜು ಕಂಪನಿಗಳು 2015 ರಿಂದ ಈಚೆಗೆ ಬಂಡವಾಳ ವೆಚ್ಚದಲ್ಲಿ ಸಕ್ರಮಗೊಂಡ/ಸಾಮಾನ್ಯ IP ಸೆಟ್‌ಗಳಿಗೆ ವಿದ್ಯುತ್ ಮೂಲಸೌಕರ್ಯ ಕಲ್ಪಿಸಿರುವುದಕ್ಕೆ ಘಟನೋತ್ತರ ಅನುಮೋದನೆ ನೀಡಿದ.
(3) ವಿದ್ಯುತ್ ಸರಬರಾಜು ಕಂಪನಿಗಳು ಸಕ್ರಮಗೊಳಿಸಿದ ಕೃಷಿ ಪಂಪ್‌ಸೆಟ್‌ಗಳಿಗೆ 2022-23 ಮತ್ತು 2023-24 ರಲ್ಲಿ ಟೆಂಡರ್ ಮೂಲಕ ಮೂಲಸೌಕರ್ಯಗಳನ್ನು ಕಲ್ಪಿಸುವ ಸಲುವಾಗಿ ಟೆಂಡರ್ ಕರೆಯಲಾದ ಅಂದಾಜುಪಟ್ಟಿಯನ್ನು ಪುನರ್ ಪರಿಶೀಲಿಸಿ, ಪಂಪ್‌ಸೆಟ್‌ಗಳು ಹಾಲಿ ಇರುವ ವಿದ್ಯುತ್ ಜಾಲದಿಂದ 500 ಮೀಟರ್‌ಯಿಂದಾಚೆಯಿದ್ದಲ್ಲಿ ಕ್ರಮಸಂಖ್ಯೆ (5) ರಂತ ಕಾಮಗಾರಿಗಳನ್ನು ಕೈಗೊಳ್ಳುವುದು ಮತ್ತು 500 ಮೀಟರ್ ಒಳಗಿರುವ ಪಂಪ್‌ಸೆಟ್‌ಗಳಿಗೆ ಕನಿಷ್ಠ ಅವಶ್ಯಕತೆಗೆ ತಕ್ಕಂತೆ ಅನುಷ್ಠಾನಗೊಳಿಸಲು ಕ್ರಮವಹಿಸುವುದು.
(4) ದಿನಾಂಕ 22.9,2023 ರೊಳಗೆ ನೋಂದಾಯಿಸಲ್ಪಟ್ಟ IP set ಸಂಖ್ಯೆಗಳನ್ನು ಕೂಡಲೇ ಧೃಢಪಡಿಸಿಕೊಂಡು ಟೆಂಡರ್ ಕರೆಯಬೇಕಾದ ಕಾಮಗಾರಿಗಳನ್ನು ನಿಯಮಾನುಸಾರ ಕ್ರಮವಹಿಸಲು ಅನುಮೋದಿಸಿದೆ.
(5) ಈಗಾಗಲೇ ನೋಂದಣಿಗೊಂಡು ಮೂಲಸೌಕರ್ಯ ರಚನೆಗೆ ಕಾಯುತ್ತಿರುವ ಅಥವಾ ಹೊಸದಾಗಿ ನೋಂದಣಿಗೊಳ್ಳುವ ಪಂಪ್‌ಸೆಟ್‌ಗಳು, ವಿದ್ಯುತ್ ಜಾಲದಿಂದ 500ಮೀಟರ್‌ಯಿಂದಾಚೆ ಇದ್ದಲ್ಲಿ, stand-alone/off-grid solar ಪಂಪ್‌ಸೆಟ್ ಅಳವಡಿಸಲು ಸೂಚಿಸಿದೆ. ಸೌರ ಪಂಪ್‌ಸೆಟ್‌ಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರದಿಂದ ಶೇ.30 ರಷ್ಟು ಸಹಾಯಧನ ಅಲ್ಲದ ರಾಜ್ಯ ಸರ್ಕಾರದಿಂದ ಶೇಕಡ 30 ರಷ್ಟು ಇರುವ ಸಹಾಯಧನವನ್ನು ಶೇಕಡ 50ಕ್ಕೆ ಹೆಚ್ಚಿಸಿ ಸರ್ಕಾರ ಅನುಮೋದಿಸಿದೆ. ರೈತರು ಈಗಾಗಲೇ ವಿದ್ಯುತ್ ಸಂಪರ್ಕಕ್ಕಾಗಿ ಮೊತ್ತವನ್ನು ಪಾವತಿಸಿದ್ದರೆ, ಪಾವತಿಸಿದ ಮೊತ್ತವನ್ನು ರೈತರ ವಂತಿಗೆ ಎಂದು ಪರಿಗಣಿಸಿ, ಸೌರ ಪಂಪ್‌ಸೆಟ್‌ಗಳನ್ನು ಅಳವಡಿಸುವುದು.
(6) Stand-alone/off-grid solar ಪಂಪ್ ಸೆಟ್ ಸೌಲಭ್ಯವನ್ನು ಸ್ಥಳೀಯ ಅವಶ್ಯಕತೆಯಂತೆ ಗುರುತು ಮಾಡಿ 10 HP ಸಾಮರ್ಥ್ಯಕ್ಕೆ ಮಿತಿಗೊಳಿಸುವುದು, ಆದಾಗ್ಯೂ MNRE ಷರತ್ತುಗಳ ಪುಕಾರ 7.5 HP ಸಾಮರ್ಥ್ಯಕ್ಕೆ ಅನುಗುಣವಾಗಿ ಸಬ್ಸಿಡಿ/ಅನುದಾನವು ಸೀಮಿತವಾಗಿರುತ್ತದೆ.
(7) ರೈತರು Stand-alone/off-grid solar ಪಂಪ್‌ಸೆಟ್ ಅಳವಡಿಸಿಕೊಂಡ ನಂತರ, ಅಂತಹ ಪಂಪ್ ಸೆಟ್ ಗಳನ್ನು GRID POWER ಜಾಲದ ಸಂಪರ್ಕದಿಂದ ಕಡಿತಗೊಳಿಸಲು ಎಲ್ಲಾ ESCOM ಗಳು ಕ್ರಮವಹಿಸುವುದು.
(8) ಇಲಾಖೆಯಿಂದ ಇಲಾಖೆಗೆ ಶುಲ್ಕರಹಿತ ವರ್ಗಾವಣೆ ಆಧಾರದ ಮೇಲೆ ಸರ್ಕಾರಿ ಜಮೀನನ್ನು ಕಂದಾಯ ಇಲಾಖೆಯಿಂದ ಇಂಧನ ಇಲಾಖೆಗೆ ಪಡೆಯುವ ಮೂಲಕ ಸಬ್‌ಸ್ಟೇಷನ್‌ನ ಬಳಿ RESCO ಮಾದರಿಯಡಿಯಲ್ಲಿ KUSUM-C ಪ್ರಕಾರ ಫೀಡರ್ ಸೌರೀಕರಣ ಅನುಷ್ಠಾನಗೊಳಿಸುವುದು.
(9) KERC ನೀಡಿರುವ ಕಾಲಮಿತಿಯೊಳಗೆ ಎಲ್ಲಾ IP ಸೆಟ್ ಗಳನ್ನು ಎಣಿಕೆ ಮಾಡಿ ಅವುಗಳನ್ನು ಆಯಾ ರೈತರ ಆಧಾರ್ ಸಂಖ್ಯೆಗೆ ಲಿಂಕ್ ಮಾಡಲು ESCOM ಗಳು ಅಗತ್ಯ ಕ್ರಮ ತೆಗೆದುಕೊಂಡು ಪೂರ್ಣಗೊಳಿಸುವುದು.
(10) ದಿನಾಂಕ 22.9.2023ರ ನಂತರ ನೋಂದಾಯಿಸಲ್ಪಡುವ IP ಸೆಟ್‌ಗಳಿಗೆ ಮೂಲಸೌಕರ್ಯವನ್ನು ರೈತರು ಸ್ವಯಂ-ಕಾರ್ಯನಿರ್ವಹಣೆಯಡಿ (self- execution) ರಚಿಸಿಕೊಳ್ಳತಕ್ಕದ್ದು. ನೀರಾವರಿ ಪಂಪ್‌ಸೆಟ್‌ಗಳ ಬಗ್ಗೆ ಈ ಹಿಂದೆ ಹೊರಡಿಸಲಾಗಿದ್ದ ಎಲ್ಲಾ ಸರ್ಕಾರಿ ಆದೇಶ/ಸುತ್ತೋಲೆಗಳನ್ನು ಹಿಂಪಡೆಯಲಾಗಿದೆ.