
ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಹೆಣ್ಣು ಚಿರತೆ ಸಾವನ್ನಪ್ಪಿದ್ದು, ದೇಶದಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಜನಸಂಖ್ಯೆಯನ್ನು ಪುನಃಸ್ಥಾಪಿಸಲು ಸರ್ಕಾರದ ಮಹತ್ವಾಕಾಂಕ್ಷೆಯ ವನ್ಯಜೀವಿ ಯೋಜನೆಗೆ ಆಘಾತ ತಂದಿದೆ. ಐದು ವಾರಗಳಲ್ಲಿ ಚೀತಾದ ಮೂರನೇ ಸಾವು ಇದಾಗಿದೆ.
ಫೆಬ್ರುವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಿಶೇಷವಾಗಿ ಏರ್ಲಿಫ್ಟ್ ಮಾಡಲಾದ 12 ಚೀತಾಗಳಲ್ಲಿ ಹೆಣ್ಣು ಚಿರತೆ ದಕ್ಷಾ ಕೂಡ ಸೇರಿದ್ದು, ಉದ್ಯಾನವನದ ಅಧಿಕಾರಿಗಳ ಪ್ರಕಾರ, ಮಂಗಳವಾರ ಬೆಳಿಗ್ಗೆ 10:45 ರ ಸುಮಾರಿಗೆ ಆವರಣದಲ್ಲಿ ಪ್ರಾಣಿ ಗಾಯಗೊಂಡಿರುವುದು ಕಂಡುಬಂದಿದೆ. ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣವೇ ಸ್ಥಳಾಂತರಿಸಲಾಯಿತು, ಆದರೆ ಎರಡು ಗಂಟೆಗಳ ನಂತರ ದಕ್ಷಾ ಚಿರತೆ ಸಾವನ್ನಪ್ಪಿದೆ.
ಮೇ 1 ರಂದು ದಕ್ಷಾ ಹೆಣ್ಣು ಚಿರತೆ ಜೊತೆಗೆ ಎರಡು ಗಂಡು ಚಿರತೆಗಳಾದ ವಾಯು ಮತ್ತು ಅಗ್ನಿ ಸೇರುವಿಕೆ ಉತ್ತೇಜಿಸಲು ಆವರಣದಲ್ಲಿ ಬಿಡಲಾಗಿದ್ದು, ಪ್ರಣಯದ ಸಮಯದಲ್ಲಿ ಗಂಡು ಚಿರತೆಗಳು ಹೆಣ್ಣು ಚಿರತೆಯನ್ನು ಸೋಲಿಸಿದವು. ಇದು ಮಾರಣಾಂತಿಕ ಗಾಯಗಳಿಗೆ ಕಾರಣವಾಯಿತು.
ಸಂಯೋಗದ ಸಮಯದಲ್ಲಿ ಹೆಣ್ಣು ಚಿರತೆಗಳ ಕಡೆಗೆ ಗಂಡು ಚಿರತೆಗಳ ಇಂತಹ ಹಿಂಸಾತ್ಮಕ ನಡವಳಿಕೆಗಳು ಸಾಮಾನ್ಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಮೇಲ್ವಿಚಾರಣಾ ತಂಡದ ಹಸ್ತಕ್ಷೇಪದ ಸಾಧ್ಯತೆಗಳು ಬಹುತೇಕ ಅಸ್ತಿತ್ವದಲ್ಲಿರಲ್ಲ ಮತ್ತು ಪ್ರಾಯೋಗಿಕವಾಗಿ ಅಸಾಧ್ಯ. ಮೃತ ಹೆಣ್ಣು ಚಿರತೆಯ(ದಕ್ಷಾ) ಶವಪರೀಕ್ಷೆಯನ್ನು ಪಶುವೈದ್ಯಕೀಯ ತಂಡವು ಪ್ರೋಟೋಕಾಲ್ ಪ್ರಕಾರ ನಡೆಸಿದೆ ಎಂದು ಸರ್ಕಾರದ ಹೇಳಿದೆ.