ಬೆಂಗಳೂರು: ಮಹಿಳೆಯ ಶವವನ್ನು ಡ್ರಮ್‌ನಲ್ಲಿ ತುಂಬಿ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಮುಖ್ಯ ಗೇಟ್‌ನಲ್ಲಿ ಎಸೆದ ಘಟನೆ ನಡೆದಿದೆ.
ಬೆಂಗಳೂರು ಪೊಲೀಸರು ಸೋಮವಾರ ಮೃತದೇಹ ಪತ್ತೆ ಮಾಡಿ ತನಿಖೆ ಆರಂಭಿಸಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಲು ಯತ್ನಿಸುತ್ತಿರುವಾಗಲೇ ಆಟೋದಲ್ಲಿ ಬಂದ ಮೂವರು ವ್ಯಕ್ತಿಗಳು ಶವವನ್ನು ರೈಲು ನಿಲ್ದಾಣದ ಮುಖ್ಯ ಗೇಟ್‌ಗೆ ಎಸೆದಿದ್ದಾರೆ ಎಂದು ಹೇಳಲಾಗಿದೆ.
ರೈಲ್ವೇ ಪ್ರೊಟೆಕ್ಷನ್ ಫೋರ್ಸ್(RPF) ಅಧಿಕಾರಿಗಳಿಗೆ ಕೆಟ್ಟ ವಾಸನೆಯ ಬಗ್ಗೆ ಮಾಹಿತಿ ಬಂದಿದ್ದು, ಅದರ ಮೂಲವನ್ನು ಗುರುತಿಸಲು ಸಾಧ್ಯವಾಗಲಿಲ್ಲ. ದಿನದ ಅಂತ್ಯದ ವೇಳೆಗೆ ಮುಖ್ಯ ಗೇಟ್ ಬಳಿ ಆವರಣದಲ್ಲಿ ಬಿದ್ದಿರುವ ಗಮನಿಸದ ಪ್ಲಾಸ್ಟಿಕ್ ಡ್ರಮ್ ಕಣ್ಣಿಗೆ ಬಿದ್ದಿದೆ.
ನಂತರ ಆರ್‌ಪಿಎಫ್ ಅಧಿಕಾರಿಗಳು ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರಿಗೆ ಕರೆ ಮಾಡಿದ್ದಾರೆ. ರೈಲ್ವೆ ಪೊಲೀಸ್‌ನ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಡ್ರಮ್ ಪರಿಶೀಲಿಸಿದಾಗ ಅದರೊಳಗೆ ಕೊಳೆತ ದೇಹ ಪತ್ತೆಯಾಗಿದೆ.
ಇದು ಮೂರು ತಿಂಗಳ ಅವಧಿಯಲ್ಲಿ ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಮಹಿಳೆಯ ಶವ ಪತ್ತೆಯಾದ ಮೂರನೇ ಇಂತಹ ಘಟನೆಯಾಗಿದೆ. ಪೊಲೀಸರು ಈ ಭೀಕರ ಕೊಲೆಗಳ ಮಾದರಿಯನ್ನು ಗಮನಿಸಿ ಅವರ ಹಿಂದೆ ಒಬ್ಬ ಸರಣಿ ಕೊಲೆಗಾರನಿರಬಹುದು ಎಂದು ಶಂಕಿಸಿದ್ದಾರೆ.
ಜನವರಿ 4ರಂದು ಯಶವಂತಪುರ ರೈಲು ನಿಲ್ದಾಣದಲ್ಲಿ ಡ್ರಮ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಅದಕ್ಕೂ ಮೊದಲು, ಡಿಸೆಂಬರ್ 6, 2022 ರಂದು ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ರೈಲು ಸಂಖ್ಯೆ 06527(ಬಂಗಾರಪೇಟೆ-ಎಸ್‌ಎಂವಿಟಿ ಬೆಂಗಳೂರು ಎಕ್ಸ್ ಪ್ರೆಸ್) ಕಂಪಾರ್ಟ್‌ಮೆಂಟ್‌ನಲ್ಲಿ ಮತ್ತೊಬ್ಬ ಮಹಿಳೆ ಶವ ಪತ್ತೆಯಾಗಿತ್ತು.