ಕಲಬುರಗಿ: ಬಿಸಿಎ ಮೊದಲ ಸೆಮಿಸ್ಟರ್ ಗಣಿತ ಪರೀಕ್ಷೆಯಲ್ಲಿ ಅಕ್ರಮ ನಡೆದ ಆರೋಪ ಕೇಳಿ ಬಂದಿದೆ. ಪರೀಕ್ಷೆ ಮುಗಿದ 15 ನಿಮಿಷದ ನಂತರವೂ ಪರೀಕ್ಷೆ ಬರೆಸಲಾಗಿದೆ.
ಕಲಬುರಗಿಯ ಎಂಜಿ ರಸ್ತೆಯ ಯುನೈಟೆಡ್ ಡಿಗ್ರಿ ಖಾಸಗಿ ಕಾಲೇಜಿನಲ್ಲಿ ಘಟನೆ ನಡೆದಿದೆ. ಪರೀಕ್ಷಾ ಅಕ್ರಮ ಹಿನ್ನೆಲೆಯಲ್ಲಿ ಪರೀಕ್ಷಾ ಕೊಠಡಿಗೆ ಎಬಿಬಿಪಿ ಕಾರ್ಯಕರ್ತರು ನುಗ್ಗಿದ್ದು, ಪರೀಕ್ಷಾ ಅಕ್ರಮದ ಬಗ್ಗೆ ರೆಡ್ ಅಂಡ್ ಹಿಡಿದಿದ್ದಾರೆ.
ಆದರೆ, ಅಕ್ರಮ ನಡೆದಿಲ್ಲ ಎಂದು ಖಾಸಗಿ ಡಿಗ್ರಿ ಕಾಲೇಜು ಸಿಬ್ಬಂದಿ ಹೇಳಿದ್ದಾರೆ. 80 ವಿದ್ಯಾರ್ಥಿಗಳಿಗೆ ಕಡಿಮೆ ಪ್ರಶ್ನೆ ಪತ್ರಿಕೆ ಬಂದಿದ್ದು, ಜೆರಾಕ್ಸ್ ಮಾಡಿಸಿ ಹಂಚಿಕೆ ಮಾಡಲು 15 ನಿಮಿಷ ವಿಳಂಬವಾಗಿದ್ದರಿಂದ 80 ವಿದ್ಯಾರ್ಥಿಗಳಿಗೆ 15 ನಿಮಿಷ ಹೆಚ್ಚುವರಿ ಸಮಯ ನೀಡಲಾಗಿದೆ. ಯಾವುದೇ ಅಕ್ರಮ ನಡೆಸಿಲ್ಲ ಎಂದು ತಿಳಿಸಿದ್ದಾರೆ.