
ಪಾಕಿಸ್ತಾನದಲ್ಲಿ ಅಜ್ಞಾತ ದುಷ್ಕರ್ಮಿಗಳು ಲಷ್ಕರ್-ಎ-ತೈಬಾದ ಉನ್ನತ ಕಮಾಂಡರ್ ಅಕ್ರಮ್ ಖಾನ್ ಅಲಿಯಾಸ್ ಅಕ್ರಮ್ ಗಾಜಿಯನ್ನು ಗುಂಡಿಕ್ಕಿ ಕೊಂದಿದ್ದಾರೆ.
ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಅಕ್ರಮ್ ಗಾಜಿಯನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದರು. ಅಕ್ರಮ್ ಗಾಜಿ 2018 ರಿಂದ 2020 ರವರೆಗೆ ಲಷ್ಕರ್ ತೈಬಾದ ನೇಮಕಾತಿ ಸೆಲ್‌ನ ಮುಖ್ಯಸ್ಥನಾಗಿದ್ದ ಮತ್ತು ಭಾರತದ ವಿರುದ್ಧ ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ.
ಅಕ್ರಮ್ ಗಾಜಿಯ ಹತ್ಯೆಯು ಲಷ್ಕರ್ ತೈಬಾಗೆ ದೊಡ್ಡ ಹೊಡೆತವಾಗಿದೆ. ಪಾಕಿಸ್ತಾನದ ತನಿಖಾ ಸಂಸ್ಥೆಗಳು ಈ ಹತ್ಯೆಯ ತನಿಖೆ ನಡೆಸುತ್ತಿವೆ. ಈ ಹತ್ಯೆಯನ್ನು ಸ್ಥಳೀಯ ಪೈಪೋಟಿ ಮತ್ತು ಆಂತರಿಕ ಸಂಘರ್ಷಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ.
ಈ ವಾರದಲ್ಲಿ ಇದು ಎರಡನೇ ಹತ್ಯೆಯಾಗಿದ್ದು, ಭಾರತದ ವಿರುದ್ಧ ಸಂಚು ರೂಪಿಸುತ್ತಿರುವ ಉಗ್ರನನ್ನು ಕೊಲ್ಲಲಾಗಿದೆ. ಇದಕ್ಕೂ ಮೊದಲು ಜಮ್ಮು ಕಾಶ್ಮೀರದಲ್ಲಿ 2018 ರ ಸುಂಜುವಾನ್ ಭಯೋತ್ಪಾದಕ ದಾಳಿಯ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬನಾದ ಖ್ವಾಜಾ ಶಾಹಿದ್ ನನ್ನು ಅಪಹರಿಸಲಾಗಿತ್ತು ಮತ್ತು ನಂತರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಿಯಂತ್ರಣ ರೇಖೆಯ ಬಳಿ ಅವನ ಶಿರಚ್ಛೇದನ ಮಾಡಿದ ಸ್ಥಿತಿಯಲ್ಲಿ ಕಂಡುಬಂದಿದ್ದ.