ಕೋವಿಡ್ನಿಂದಾಗಿ ಸಂಗೀತಗಾರನೊಬ್ಬ ಚಹಾ ಮಾರಾಟಗಾರನಾಗಿ ಪರಿವರ್ತನೆ ಹೊಂದಬೇಕಾಗಿ ಬಂದರೂ ಆತ ತೋರುತ್ತಿರುವ ಟ್ಯಾಲೆಂಟ್ನ ವಿಡಿಯೋ ಇದೀಗ ವೈರಲ್ ಆಗಿದ್ದು, ನೆಟ್ಟಿಗರ ಮನಸ್ಸು ಗೆದ್ದಿದೆ.
ದುರ್ಗಾಪುರದಲ್ಲಿ, ಚಹಾ ಮಾರಾಟ ಮಾಡುತ್ತಿರು ಸಂಗೀತಗಾರ ಬಿಕಾಶ್ ಇದೀಗ ಚಹಾ ಮಾರುವ ಮೂಲಕವೇ ಸಂಗೀತಗಾರನಾಗಿ ತನ್ನ ಹವ್ಯಾಸವನ್ನು ಪೂರೈಸಿಕೊಳ್ಳುತ್ತಿದ್ದು, ಇದಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ತನ್ನ ಬಳಿ ಚಹಾ ಕುಡಿಯಲು ಬರುವವರಿಗೆ ಹಾಡುಗಳ ಮೂಲಕವೇ ಬಿಕಾಶ್ ಸ್ವಾಗತಿಸುತ್ತಾನೆ. ನಿತ್ಯ ನೂರಾರು ಗ್ರಾಹಕರು ಈ ಯುವಕನ ಬಳಿ ಟೀ ಕುಡಿಯಲು ಬರುತ್ತಾರೆ. ಅವರಿಗೆ ಹಾಡು ಹಾಡುತ್ತಲೇ ಚಹ ನೀಡುತ್ತಾನೆ. ಈತನ ಬಿಕಾಶ್ “ಮಟ್ಕಾ ಚಾ” ಭಾರಿ ಪ್ರಸಿದ್ಧಿಗೆ ಬಂದಿದೆ.
ಅಂದಹಾಗೆ ಬಿಕಾಶ್ ಠಾಕೂರ್ ದುರ್ಗಾಪುರದ ಯುವಕ. 2020ರವರೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಹಾಡುವ ಮೂಲಕ ಪ್ರೇಕ್ಷಕರನ್ನು ಆಕರ್ಷಿಸುತ್ತಿದ್ದರು. ಆದರೆ ಕೊರೋನಾದಿಂದಾಗಿ ವೇದಿಕೆಯಲ್ಲಿ ಹಾಡುವುದನ್ನು ನಿಲ್ಲಿಸಬೇಕಾಯಿತು. ಹೀಗಾಗಿ ಜೀವನೋಪಾಯಕ್ಕೆ ದಾರಿ ಕಂಡುಕೊಳ್ಳಲು ಬಿಕಾಶ್ ಠಾಕೂರ್ ಚಹಾ ಮಾರಾಟ ಮಾಡಲು ಆರಂಭಿಸಿದ.
ಈ ನಡುವೆ ಅಪಘಾತದಲ್ಲಿ ಕಾಲು ಮುರಿದುಕೊಂಡ ಬಿಕಾಶ್. ಇಷ್ಟಾದರೂ ಕುಗ್ಗಲಿಲ್ಲ. ಸಂಗೀತದ ಕಡೆಗೆ ಈತನ ಒಲವು ಕಡಿಮೆಯಾಗಲಿಲ್ಲ. ಆದ್ದರಿಂದ ಚಹಾ ಮಾರುವುದರ ಜೊತೆಗೆ ಹಾಡುವುದನ್ನು ಮುಂದುವರೆಸಿದ್ದಾನೆ. ಈತನ ಮಧುರ ಕಂಠ ಗ್ರಾಹಕರನ್ನು ರಂಜಿಸುತ್ತಿದೆ. ಇದರಿಂದಾಗಿಯೇ ಹೆಚ್ಚುಹೆಚ್ಚು ಜನರು ಇಲ್ಲಿಗೆ ಬರುತ್ತಿದ್ದು, ಬಿಕಾಶ್ಪ್ರಸಿದ್ಧನಾಗಿದ್ದಾನೆ. ಈತನ ವಿಡಿಯೋಗೆ ಭಾರಿ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.