ಭವಿಷ್ಯವಾಣಿ ನುಡಿಯುವವರು ಹಲವರು ಇದ್ದಾರೆ. ಬಲ್ಗೇರಿಯನ್ ಅತೀಂದ್ರಿಯ ಬಾಬಾ ವಂಗಾ ಇದಾಗಲೇ ಸಾಕಷ್ಟು ಸುದ್ದಿ ಮಾಡಿರುವವರು. ಈಗ ಅವರನ್ನೇ ಹೋಲುವ ಮಹಿಳೆಯೊಬ್ಬರು ಭವಿಷ್ಯ ನುಡಿದಿದ್ದಾರೆ. ಹನ್ನಾ ಕ್ಯಾರೊಲ್ ಎಂಬಾಕೆ ವರ್ಷದ ಆರಂಭದಲ್ಲಿ 28 ಭವಿಷ್ಯವಾಣಿಗಳನ್ನು ಬರೆದಿದ್ದಾರೆ.
ಇವುಗಳಲ್ಲಿ 12 ಪ್ರಮುಖ ಘಟನೆಗಳು ಈಗಾಗಲೇ ನಿಜವಾಗಿವೆ. ವಿಶೇಷವಾಗಿ ರಾಣಿ ಎಲಿಜಬೆತ್ II ರ ಮರಣವನ್ನು ಸರಿಯಾಗಿ ಊಹಿಸಿದ್ದಾರೆ. ಆಕೆಯ ಇತರ ಕೆಲವು ಭವಿಷ್ಯವಾಣಿಗಳಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್ ಮಗುವನ್ನು ಸ್ವಾಗತಿಸುತ್ತಿರುವುದು, ರಿಹಾನ್ನಾ ತನ್ನ ಗರ್ಭಾವಸ್ಥೆಯನ್ನು ಘೋಷಿಸುವುದು ಮತ್ತು ಹ್ಯಾರಿ ಸ್ಟೈಲ್ಸ್ ಮತ್ತು ಬೆಯಾನ್ಸ್ನಿಂದ ಹೊಸ ಆಲ್ಬಂಗಳ ಭವಿಷ್ಯವಾಣಿಯನ್ನೂ ನುಡಿಯಲಾಗಿತ್ತು.
ಮಾಧ್ಯಮಗಳ ಜೊತೆ ಮಾತನಾಡಿದ ಹನ್ನಾ, ಹೇಳಿದರು, “ನಾನು ಊಹಿಸಿದ ಏನಾದರೂ ಸಂಭವಿಸಿದಾಗ ಅದು ನಿಜವಾಗಿಯೂ ರೋಮಾಂಚನಕಾರಿಯಾಗಿದೆ, ಹಲವರು ಹಲವು ರೀತಿಯ ಪ್ರಶ್ನೆಗಳನ್ನು ನನಗೆ ಕೇಳುತ್ತಿರುತ್ತಾರೆ. ನಾನು ಹೇಳುವುದೆಲ್ಲವೂ ನಿಜವಾಗಿರುತ್ತವೆ ಎಂದು ಅವರು ಪ್ರತಿಕ್ರಿಯೆ ನೀಡಿದಾಗ ನನಗೆ ಸಂತೋಷವಾಗುತ್ತದೆ ಎಂದು ಅವರು ಹೇಳಿದರು.
ಇದಾಗಲೇ ಹಲವು ತಾರೆಯರ ಕುರಿತಾಗಿ ಮೊದಲೇ ಹನ್ನಾ ಭವಿಷ್ಯವನ್ನು ನುಡಿದಿದ್ದಾರೆ. ಇದು ನಿಜವಾಗುತ್ತದೆ ಎನ್ನುವುದು ಅವರ ಮಾತು. ಅಂದಹಾಗೆ ಈಕೆಯ ವಯಸ್ಸು 19 ವರ್ಷ!