ತುಮಕೂರು : ಹಿರಿಯ ಸಾಹಿತಿ ಡಾ.ಗೊ.ರು ಚನ್ನಬಸಪ್ಪಗೆ 2024 ನೇ ಸಾಲಿನ ಸಿದ್ದಗಂಗಾ ಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಟ್ರಸ್ಟ್ ನೀಡುವ 2024 ನೇ ಸಾಲಿನ ಸಿದ್ದಗಂಗಾ ಶ್ರೀ ಪ್ರಶಸ್ತಿಗೆ ಡಾ.ಗೊರೂರು ಚನ್ನಬಸಪ್ಪ ಆಯ್ಕೆ ಆಗಿದ್ದಾರೆ.
ಈ ಪ್ರಶಸ್ತಿಯು 1 ಲಕ್ಷ ರೂ ನಗದು ಹಾಗೂ ಅಭಿನಂದನಾ ಪತ್ರ, ಸ್ಮರಣಿಕೆ ಒಳಗೊಂಡಿದೆ. ಜ.21 ರಂದು ಸಿದ್ದಗಂಗಾ ಮಠದಲ್ಲಿ ನಡೆಯಲಿರುವ ಶ್ರೀಗಳ ಪುಣ್ಯಸ್ಮರಣೆ ದಿನ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಗೊಂಡೇದಹಳ್ಳಿ ರುದ್ರಪ್ಪ ಚನ್ನಬಸಪ್ಪ (ಜನನ:೧೯೩೦) ಅಥವಾ ಸರಳವಾಗಿ ಗೊ. ರು. ಚನ್ನಬಸಪ್ಪ ಅವರು ಒಬ್ಬ ಭಾರತೀಯ ಕವಿ, ಬರಹಗಾರ, ವಿದ್ವಾಂಸ ಮತ್ತು ಕನ್ನಡದ ಜಾನಪದ ತಜ್ಞ. ಅವರು ವಚನ ಸಾಹಿತ್ಯ ಮತ್ತು ಕನ್ನಡ ಜಾನಪದ ಕೃತಿಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರಿಗೆ ರಾಷ್ಟ್ರೀಯ ಬಸವ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.