ಗೋಸುಂಬೆಯಂತೆ ಬಣ್ಣ ಬದಲಾಯಿಸುತ್ತೆ ಈ ಹಕ್ಕಿ…..! 26-07-2022 9:20AM IST / No Comments / Posted In: Latest News, Live News, International ಪ್ರಕೃತಿಯು ಅನೇಕ ವಿಸ್ಮಯಗಳ ಗೂಡಾಗಿದೆ. ಚಿತ್ರ-ವಿಚಿತ್ರ ಜೀವಿಗಳ ತಾಣವಾಗಿದೆ. ಇದನ್ನು ಯಾಕೆ ಹೇಳ್ತಾ ಇದ್ದೀವಿ ಅಂದ್ರೆ, ನೀವು ಬಣ್ಣ ಬದಲಿಸೋ ಗೋಸುಂಬೆ, ಹಾವನ್ನು ನೋಡಿರ್ತೀರಾ. ಆದ್ರೆ ಬಣ್ಣ ಬದಲಿಸೋ ಹಕ್ಕಿಯನ್ನು ಎಂದಾದ್ರೂ ನೋಡಿದ್ದೀರಾ..? ಹೌದು, ಇದೀಗ ವೈರಲ್ ಆಗಿರೋ ವಿಡಿಯೋ ನಿಮಗೆ ಅಚ್ಚರಿ ತರದೆ ಇರಲಾರದು. ಹಮ್ಮಿಂಗ್ ಪಕ್ಷಿಯ ವಿಡಿಯೋ ಇಂಟರ್ನೆಟ್ ಅನ್ನು ಸಂಪೂರ್ಣವಾಗಿ ದಿಗ್ಭ್ರಮೆಗೊಳಿಸಿದೆ. ತನ್ನ ಸುತ್ತಲೂ ಇರುವ ಬೆಳಕಿನ ಪ್ರಮಾಣವನ್ನು ಅವಲಂಬಿಸಿ ಬಣ್ಣಗಳನ್ನು ಬದಲಾಯಿಸುವ ಪುಟಾಣಿ ಹಕ್ಕಿಯನ್ನು ಕಂಡು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಅಂದಹಾಗೆ, ಈ ವಿದ್ಯಮಾನವು ನ್ಯಾನೊಸ್ಕೇಲ್ ರಚನೆಗಳಿಂದ ಅವುಗಳ ವೈಶಿಷ್ಟ್ಯಗಳೊಳಗೆ ಬೆಳಕಿನ ಚದುರುವಿಕೆಯಿಂದ ಉಂಟಾಗುತ್ತದೆ. ವೈರಲ್ ವಿಡಿಯೋದಲ್ಲಿ, ಹಕ್ಕಿಯು ತನ್ನ ಕುತ್ತಿಗೆಯನ್ನು ಅತ್ತಿತ್ತ ತಿರುಗಿಸುವಾಗ ಬಣ್ಣ ಬದಲಾಯಿಸಿದೆ. ಈ ವಿಡಿಯೋವನ್ನು ವಂಡರ್ ಆಫ್ ಸೈನ್ಸ್ ನ ಟ್ವಿಟ್ಟರ್ ಪುಟ ಹಂಚಿಕೊಂಡಿದೆ. ಅನ್ನಾಸ್ ಹಮ್ಮಿಂಗ್‌ಬರ್ಡ್‌ನ ವಿಡಿಯೋವನ್ನು ಹಂಚಿಕೊಳ್ಳುತ್ತಾ “ಅನ್ನಾಸ್ ಹಮ್ಮಿಂಗ್ ಬರ್ಡ್‌ನ ಬೆರಗುಗೊಳಿಸುವ ಬಣ್ಣಗಳು ಅವುಗಳ ಗರಿಗಳೊಳಗಿನ ನ್ಯಾನೊಸ್ಕೇಲ್ ರಚನೆಗಳಿಂದ ಬೆಳಕಿನ ಚದುರುವಿಕೆಯಿಂದ ಉಂಟಾಗುವ ವರ್ಣವೈವಿಧ್ಯವಾಗಿದೆ” ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ಮೈಕ್ರೋ-ಬ್ಲಾಗಿಂಗ್ ಸೈಟ್‌ನಲ್ಲಿ 92 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳು ಮತ್ತು ಸುಮಾರು 14 ಸಾವಿರ ರಿಟ್ವೀಟ್‌ಗಳನ್ನು ಗಳಿಸಿದೆ. ಅನ್ನಾಸ್ ಹಮ್ಮಿಂಗ್ ಬರ್ಡ್ ಉತ್ತರ ಅಮೆರಿಕಾದ ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಅವುಗಳು ಹೂವುಗಳಿಂದ ಮಕರಂದವನ್ನು ತಿನ್ನುತ್ತವೆ. The stunning colors of the Anna's hummingbird are iridescence caused by light scattering from nanoscale structures within their feathers.pic.twitter.com/BZzXuFnHag — Wonder of Science (@wonderofscience) July 21, 2022