ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಪಡಿತರ ವಿತರಿಸಲು ಸರ್ಕಾರ ಮತ್ತೊಂದು ಕ್ರಮಕೈಗೊಂಡಿದೆ
ಪರಿಶಿಷ್ಟ ಜಾತಿ ಮತ್ತು ಪಂಗಡ ಕಾಲೋನಿಗಳು, ಹಾಡಿಗಳು, ತಾಂಡಾಗಳು, ಗೊಲ್ಲರಹಟ್ಟಿ ಕಾಲೋನಿಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡಲು ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ 10,89,445 ಅಂತ್ಯೋದಯ, 1,15,02,798 ಬಿಪಿಎಲ್ ಮತ್ತು 21,44,006 ಎಪಿಎಲ್ ಕಾರ್ಡ್ ದಾರರಿದ್ದು, ಪಡಿತರ ಪಡೆದುಕೊಳ್ಳಲು ಅನುಕೂಲವಾಗುವಂತೆ 100 ರೇಷನ್ ಕಾರ್ಡ್ ಗಳಿಗೆ ಒಂದರಂತೆ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲಾಗುವುದು ಎನ್ನಲಾಗಿದೆ.