ಬೆಂಗಳೂರು : ಅಣ್ಣ- ತಮ್ಮ ಬೇರೆ ಆಗಿದ್ದೇವೆ ಎಂದು ಯಾರು ಹೇಳಿದ್ರು.? ಎಂದು ನಟ ದರ್ಶನ್ ಬಗ್ಗೆ ಸಹೋದರ ದಿನಕರ್ ತೂಗುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು ಅಣ್ಣ- ತಮ್ಮ ಬೇರೆ ಆಗಿದ್ದೇವೆ ಎಂದು ಯಾರು ಹೇಳಿದ್ರು.? ಅತ್ತಿಗೆ ಜೊತೆ ಕಾಂಟ್ಯಾಕ್ಟ್ ನಲ್ಲಿದ್ದೇನೆ ಎಂದು ಹೇಳಿದ್ದಾರೆ.
ದರ್ಶನ್ ನನಗಿಂತ ಇಂಡಸ್ಟ್ರಿಯಲ್ಲಿ ಸೀನಿಯರ್..ನಾವು ಚೆನ್ನಾಗಿ ಇದ್ದೇವೆ..ದರ್ಶನ್ ಹಾಕೊಂಡು ಸಿನಿಮಾ ಮಾಡೋದು ಕನ್ಫರ್ಮ್ ಎಂದು ಹೇಳಿದ್ದಾರೆ. ದರ್ಶನ್ ಗೆ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆ ಮೈಸೂರಿಗೆ ಹೋಗಿ ಚೆಕಪ್ ಮಾಡಿಸಿದ್ದೇವೆ ಎಂದು ಹೇಳಿದ್ದಾರೆ.