ಬೆಂಗಳೂರು: ಹಸಿವು ಮುಕ್ತ ಕರ್ನಾಟಕವನ್ನಾಗಿ ಮಾಡಲು ಸಿಎಂ ಸಿದ್ದರಾಮಯ್ಯ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ವೃದ್ಧರನ್ನು ಗಮನದಲ್ಲಿಟ್ಟುಕೊಂಡು ‘ಅನ್ನ ಸುವಿಧಾ ಯೋಜನೆ’ ಘೋಷಣೆ ಮಾಡಿದ್ದಾರೆ.
80 ವರ್ಷ ಮೇಲ್ಪಟ್ಟ ವೃದ್ಧರು ಮನೆಯಲ್ಲಿದ್ದರೆ ಅವರಿಗಾಗಿ ಮನೆಗಳಿಗೆ ಆಹಾರ ಧಾನ್ಯ ವಿತರಿಸುವ ಅನ್ನ ಸುವಿಧಾ ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸಿದ್ದಾರೆ. ಹಸುವು ಮುಕ್ತ ಕರ್ನಾಟಕ, ಸಾಮಾಜಿಕ ಕಳಕಳಿಯೊಂದಿಗೆ ಈ ಮಹತ್ವದ ಘೋಷಣೆ ಮಾಡಲಾಗಿದೆ. ಅನ್ನ ಸುವಿಧಾ ಯೋಜನೆಗಾಗಿ ಹೋಮ್ ಡೆಲಿವರಿ ಆಪ್ ಜಾರಿಗೆ ತರಲಾಗುತ್ತಿದೆ.
80ವರ್ಷ ಮೇಲ್ಮಟ್ಟ ವೃದ್ಧರು ಅಥವಾ ವೃದ್ಧೆಯರು ಇರುವ ಮನೆಗಳಿಗೆ ಮಾತ್ರ ಈ ಯೋಜನೆಯಲ್ಲಿ ಆಹಾರಧಾನ್ಯ ಪೂರೈಸಲಾಗುವುದು.