
ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜನವರಿ 30 ರಿಂದ ಪ್ರತಿಭಟನೆ ನಡೆಸಲು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ನಿರ್ಧರಿಸಿದ್ದಾರೆ.
ಮಹಾರಾಷ್ಟ್ರದ ರಾಲೆಗಾಂವ್ ಸಿದ್ಧಿಯಲ್ಲಿ ಅವರು ಧರಣಿ ನಡೆಸಲಿದ್ದಾರೆ. ತಾವಿರುವ ಸ್ಥಳದಲ್ಲಿ ಧರಣಿ ನಡೆಸುವ ಮೂಲಕ ರೈತರ ಪ್ರತಿಭಟನೆಗೆ ಅಣ್ಣಾ ಹಜಾರೆ ಬೆಂಬಲ ನೀಡಲಿದ್ದು, ರೈತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.