ಬೆಂಗಳೂರು : ಹೆಚ್ಚುವರಿ 5 ಅಕ್ಕಿ ಬದಲು ಹಣ ನೀಡುವ ವ್ಯವಸ್ಥೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದ್ದು, ಪಡಿತರರ ಖಾತೆಗೆ ಸರ್ಕಾರ ನೇರವಾಗಿ ಹಣ ವರ್ಗಾವಣೆ ಮಾಡುತ್ತಿದೆ.ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಬದಲು ನೇರ ಹಣ ವರ್ಗಾವಣೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದು, 170 ರೂ ಹಣ ನೇರವಾಗಿ ಖಾತೆಗೆ ವರ್ಗಾವಣೆಯಾಗಲಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಉಚಿತ ಅಕ್ಕಿ ಘೋಷಣೆ ಮಾಡಿದ್ದು, ಹೆಚ್ಚುವರಿ ಅಕ್ಕಿ ಸಿಗುವವರೆಗೂ 5 ಕೆಜಿ ಅಕ್ಕಿ ಉಳಿದ 5 ಕೆಜಿ ಅಕ್ಕಿಗೆ ಕೆಜಿ ಅಕ್ಕಿಗೆ 34 ರೂ. ನಂತೆ 170 ರೂಪಾಯಿ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸುತ್ತಿದೆ.
ಮುಖ್ಯವಾದ ವಿಚಾರ ಅಂದರೆ ಪಡಿತರದಾರರು ತಪ್ಪದೇ ಈ ಕೆಲಸ ಮಾಡಬೇಕು. ಇಲ್ಲವಾದಲ್ಲಿ ನಿಮಗೆ ರೇಷನ್ ಸಿಗಲ್ಲ. ಅನೇಕರು ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಗೆ ಹಾಗೂ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿಲ್ಲ, ದಯವಿಟ್ಟು ಈ ಕೆಲಸ ಮಾಡಿಕೊಳ್ಳಿ. ಹಾಗೂ ಕುಟುಂಬ ಸದಸ್ಯರ e-kyc ಅಪ್ಡೇಟ್ ಆಗದಿರುವುದು ಅಥವಾ ನೀಡಿರುವ ಆಧಾರ್ ಕಾರ್ಡ್ ಮಾಹಿತಿ ತಪ್ಪಾಗಿರುವುದು , ಬ್ಯಾಂಕ್ ಅಕೌಂಟ್ ಮಾಹಿತಿ ನೀಡಿರುವುದು ಈ ಎಲ್ಲಾ ಕಾರಣದಿಂದ ಹಲವರು ಅನ್ನಭಾಗ್ಯ ಯೋಜನೆ ಹಣದಿಂದ ವಂಚಿತರಾಗಿದ್ದಾರೆ. ಆದ್ದರಿಂದ ತಪ್ಪದೇ ನೀವು ಈ ಕೆಲಸ ಮಾಡಬೇಕು.
ಅದೇ ರೀತಿ AAY ಕಾರ್ಡ್ ನಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿದ್ದರೂ ಕೂಡ ಪ್ರತಿ ಸದಸ್ಯರಿಗೆ 510 ಹೆಚ್ಚುವರಿ ಪಡಿತರ ಹಣ ನೀಡಲಾಗುತ್ತಿದೆ. ಈ ರೀತಿ ಹೆಚ್ಚುವರಿ ಅಕ್ಕಿಯ ಹಣಕ್ಕೆ ಅರ್ಹರಾಗಿರುವ ಎಲ್ಲಾ ಪಡಿತರ ಚೀಟಿ ಸದಸ್ಯರು ಕೂಡ ತಪ್ಪದೇ e-kyc ಅಪ್ಡೇಟ್ ಮಾಡಿಸಲೇಬೇಕು. ಜುಲೈ ತಿಂಗಳ ಅಂತ್ಯದ ಒಳಗೆ ನೀವು ಈ ಕೆಲಸ ಮಾಡಿದ್ರೆ ಆಗಸ್ಟ್ ತಿಂಗಳಲ್ಲಿ ಪಡಿತರ ಹಾಗೂ ಹೆಚ್ಚುವರಿ ಹಣ ಪಡೆಯಬಹುದು. ಇಲ್ಲವಾದಲ್ಲಿ ನೀವು ಸೌಲಭ್ಯದಿಂದ ವಂಚಿತರಾಗುತ್ತೀರಿ.
ಅನ್ನಭಾಗ್ಯದ ಹಣ ಅಕೌಂಟ್ ಗೆ ಬಂದಿಲ್ಲವಾದರೆ ತಪ್ಪದೇ ಈ ಕೆಲಸವನ್ನು ನೀವು ಮಾಡಬೇಕು. ಇಲ್ಲವಾದಲ್ಲಿ ಅಕೌಂಟ್ ಗೆ ಹಣ ಬರುವುದಿಲ್ಲ. ಸ್ಟೇಟಸ್ ಚೆಕ್ ಮಾಡುವಾಗ ಕೆಲವರಿಗೆ ಆಧಾರ್ ಕಾರ್ಡನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು ಅಥವಾ KYC ಅಪ್ಡೇಟ್ ಮಾಡಿಸಬೇಕು ಎನ್ನುವ ಸೂಚನೆ ಸಿಗುತ್ತಿದೆ. ಈ ಕೆಲಸ ಮಾಡಿಲ್ಲವಾದರೆ ನಿಮಗೆ ಹಣ ಬರೋದಿಲ್ಲ. ಈ ಎಲ್ಲಾ ಕೆಲಸ ಮಾಡಿದವರಿಗೆ PAV response not at received ಎಂದು ಕಾಣುತ್ತಿದೆ. ಈ ರೀತಿ ಬಂದರೆ ನೀವು ಕನಫ್ಯೂಸ್ ಆಗಬೇಡಿ. PAV ಎಂದರೆ Payment adjustment voture ಎಂದರ್ಥ. ಸ್ಟೇಟಸ್ ಚೆಕ್ ಮಾಡುವಾಗ ಈ ರೀತಿ ಬಂದರೆ, ಬ್ಯಾಂಕಿನ ಸಿಬ್ಬಂದಿಗಳು ಇನ್ನು ಹಣ ಜಮಾ ಆಗಿರುವ ಮಾಹಿತಿಯನ್ನು ನೀಡಿಲ್ಲ ಎಂಬ ಎಂದರ್ಥ. ಈ ರೀತಿ ಬಂದರೆ ನಿಮ್ಮ ಹಣ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ, ಕೆಲವೇ ದಿನಗಳಲ್ಲಿ ಹಣ ವರ್ಗಾವಣೆಯಾಗುತ್ತದೆ ಎಂದು ಅರ್ಥ.