
ಬೆಂಗಳೂರು : ಹೆಚ್ಚುವರಿ 5 ಅಕ್ಕಿ ಬದಲು ಹಣ ನೀಡುವ ವ್ಯವಸ್ಥೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದ್ದು, ಸದ್ಯ ಪಡಿತರರ ಖಾತೆಗೆ ಅಕ್ಟೋಬರ್ ತಿಂಗಳ ಹಣ ವರ್ಗಾವಣೆಯಾಗಿದೆ.ಇನ್ನೂ ನಿಮ್ಮ ಖಾತೆಗೆ ಅನ್ನಭಾಗ್ಯದ ಅಕ್ಕಿ ಹಣ ಬಂದಿದೆಯೋ ಇಲ್ವೋ ಚೆಕ್ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಚೀಟಿದಾರರಿಗೆ ಅಕ್ಟೋಬರ್ ಮಾಹೆಗೆ ಅನ್ವಯವಾಗುವಂತೆ ಪಡಿತರ ಆಹಾರ ಧಾನ್ಯವನ್ನು ಹಂಚಿಕೆ ಮಾಡಲಾಗಿದೆ.
ಅಂತ್ಯೋದಯ ಪಡಿತರ ಚೀಟಿದಾರರಿಗೆ ಕಾರ್ಡ್ಗೆ 21 ಕೆ.ಜಿ ಅಕ್ಕಿ ಮತ್ತು 14 ರಾಗಿ, ಆದ್ಯತಾ ಹಾಗೂ ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆÉ 3 ಕೆ.ಜಿ ಅಕ್ಕಿ ಮತ್ತು ಪ್ರತಿ ಸದಸ್ಯರಿಗೆ 2ಕೆ.ಜಿ ರಾಗಿ ಉಚಿತವಾಗಿ ವಿತರಿಸಲಾಗುತ್ತದೆ. ಹಾಗೂ ಪ್ರತಿ ಕೆ.ಜಿ ಗೆ ರೂ.15ರಂತೆ ಒಪ್ಪಿಗೆ ನೀಡಿದ ಎ.ಪಿ.ಎಲ್ ಏಕ ಸದಸ್ಯ ಪಡಿತರ ಚೀಟಿದಾರರಿಗೆ 5 ಕೆ.ಜಿ, ಎರಡು ಮತ್ತು ಹೆಚ್ಚಿನ ಸದಸ್ಯರನ್ನು ಹೊಂದಿರುವವರಿಗೆ 10 ಕೆ.ಜಿ ಅಕ್ಕಿಯನ್ನು ವಿತರಿಸಲಾಗುವುದು.
ಚೆಕ್ ಮಾಡುವುದು ಹೇಗೆ..?
1) ಆಹಾರ ಇಲಾಖೆಯ ವೆಬ್ ಸೈಟ್ ಗೆ https://ahara.kar.nic.in/Home/EServices ಲಾಗಿನ್ ಆಗಬೇಕು
2) ಇದರಲ್ಲಿ ಸ್ಟೇಟಸ್ ಆಫ್ ಡಿಬಿಟಿ ಅನ್ನುವ ಆಯ್ಕೆ ಕಾಣಿಸುತ್ತದೆ. ಅದನ್ನು ಆಯ್ಕೆ ಮಾಡಿ.
3) ನಂತರ ನಿಗದಿತ ಕಾಲಂ ನಲ್ಲಿ ರೇಷನ್ ಕಾರ್ಡ್ ನ ನಂಬರ್ ಕೇಳುತ್ತದೆ, ಅಂದ್ರೆ ಆರ್ ಸಿ ನಂಬರ್ನ್ನು ನಮೂದಿಸಿ
4) ನಂತರ ನಿಮ್ಮ ರೇಷನ್ ಕಾರ್ಡ್ ನ ಮೇಲ್ಬಾಗದಲ್ಲಿ ಕಾಣುವ ಆರ್ ಸಿ ನಂಬರ್ ಅನ್ನು ಇಲ್ಲಿ ನಮೂದಿಸಿ ಮುಂದುವರೆಯಿರಿ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
5) ಮುಂದಿನ ಪುಟದಲ್ಲಿ ನಿಮ್ಮ ಅಕೌಂಟ್ಗೆ ಹಣ ಜಮಾ ಆಗಿದ್ಯಾ, ಒಂದೊಮ್ಮೆ ಖಾತೆಗೆ ಹಣ ಬರದಿದ್ದಲ್ಲಿ ಅದು ಯಾವ ಕಾರಣಕ್ಕೆ ಕ್ರೆಡಿಟ್ ಆಗಿಲ್ಲ ಎಂಬ ಮಾಹಿತಿ ನಿಮಗೆ ಸಿಗಲಿದೆ.