ಬೆಂಗಳೂರು : ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ಬದಲಾಗಿ 5 ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿಗೆ ಹಣ ಪಾವತಿ ಮಾಡುತ್ತಿದ್ದು, ಈವರೆಗೆ ಅಕ್ಕಿ ಹಣ ಬಾರದೇ ಇರುವ ಪಡಿತರ ಚೀಟಿದಾರರಿಗೆ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಸಿಹಿಸುದ್ದಿ ನೀಡಿದ್ದಾರೆ.
ಹೌದು, ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಹಣ ಬಾರದೇ ಇರುವವರಿಗೆ ಸರಿಯಾದ ಮಾಹಿತಿ ಸಲ್ಲಿಸಿದ್ರೆ ಅವರ ಖಾತೆಗೆ ಹಣ ಜಮಾ ಮಾಡಲಾಗುವುದು. ಬ್ಯಾಂಕ್ ಖಾತೆ ಮಾಹಿತಿ ತಪ್ಪಾಗಿದ್ರೆ, ಸಮಸ್ಯೆ ಬಗೆಹರಿಸಿ ಕಾರ್ಡ್ ದಾರರಿಗೆ ಹಣ ಜಮೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು 1.28 ಕೋಟಿ ಬಿಪಿಎಲ್ ಕುಟುಂಬಗಳಿವೆ. 1.10 ಕಾರ್ಡ್ ದಾರರಿಗೆ 5 ಕೆಜಿ ಪಡಿತರಕ್ಕೆ ತಗಲುವ ಹಣವನ್ನು ಜಮೆ ಮಾಡಲಾಗುತ್ತಿದೆ. ಇನ್ನುಳಿದ 18 ಲಕ್ಷ ಕಾರ್ಡ್ ದಾರರಲ್ಲಿ 5 ಲಕ್ಷ ಮಂದಿ ಮೃತಪಟ್ಟಿದ್ದಾರೆ. 5 ಲಕ್ಷ ಕಾರ್ಡ್ ಗಳಿಗೆ ಯಜಮಾನರಿಲ್ಲ. ಉಳಿದ 8 ಲಕ್ಷಕ್ಕೆ ಮುಖ್ಯಸ್ಥರು, ಬ್ಯಾಂಕ್ ಖಾತೆ ಮಾಹಿತಿ ತಪ್ಪಾಗಿದೆ. ಈ ಸಮಸ್ಯೆ ಬಗೆಹರಿಸಿ ಕಾರ್ಡ್ ದಾರರಿಗೆ ಹಣ ಜಮೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.