ರಿಶಿಕೇಶ- ಉತ್ತರಾಖಂಡ್ನ ಅಂಕಿತಾ ಭಂಡಾರಿ ಹತ್ಯೆ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬಿಜೆಪಿ ಮುಖಂಡನ ಮಾಲಿಕತ್ವದ ರೆಸಾರ್ಟ್ನಲ್ಲಿ ರಿಸೆಪ್ಶನಿಸ್ಟ್ ಆಗಿದ್ದ ಅಂಕಿತಾ ಭಂಡಾರಿ ಸೆಪ್ಟೆಂಬರ್ 18 ರಿಂದ ನಾಪತ್ತೆಯಾಗಿದ್ದರು.
ಸೆಪ್ಟೆಂಬರ್ 22 ರಂದು ಆಕೆಯ ಶವ ಪತ್ತೆಯಾಗಿತ್ತು. ಪೊಲೀಸರು ತನಿಖೆ ಆರಂಭಿಸಿದಾಗ, ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಕೊಲೆಯಲ್ಲಿ ಭಾಗಿಯಾದ ಮೂವರು ಆರೋಪಿಗಳನ್ನು 24 ಗಂಟೆಗಳಲ್ಲಿ ಬಂಧಿಸಲಾಗಿದೆ.
ಇದರ ಮಧ್ಯೆಯೂ ಗಲಾಟೆ, ಗದ್ದಲ ಮುಂದುವರೆದಿದೆ. ಇದರ ಬೆನ್ನಲ್ಲೇ ವಾಟ್ಸ್ ಅಪ್ ಮೆಸೇಜ್ ಒಂದು ಬಹಿರಂಗವಾಗುತ್ತಿದೆ. ಹೌದು, ಅಂಕಿತಾ ತನ್ನ ಸ್ನೇಹಿತನಿಗೆ ಒಂದು ಮೆಸೇಜ್ ಕಳುಹಿದ್ದಾರೆ.
ನಾನು ಬಡವಳು ನಿಜ. ಹಾಗಂತ 10 ಸಾವಿರ ರೂಪಾಯಿಗೆ ನನ್ನನ್ನು ಮಾರಿಕೊಳ್ಳಲ್ಲ ಎಂದು ಮೆಸೇಜ್ ಮಾಡಿದ್ದಾರೆ. ಹಿಂದೆಯೂ ಈ ರೀತಿ ಅವರಿಗೆ ಬಲವಂತ ಮಾಡಲಾಗ್ತಾ ಇತ್ತಂತೆ. ಆದರೆ ಅದೆಲ್ಲವನ್ನೂ ಮೀರಿ ಕೆಲಸ ಮಾಡ್ತಾ ಇದ್ದರು ಎನ್ನಲಾಗಿದೆ.
ಅಂಕಿತಾ ಕಾಣೆಯಾದ ಬಳಿಕ ಪೊಲೀಸರು ಹುಡುಕಲಾರಂಭಿಸಿದ್ದರು. ನಂತರ ಆಕೆಯ ದೇಹ ಕಾಲುವೆಯೊಂದರಲ್ಲಿ ಸಿಕ್ಕಿತ್ತು. ಇನ್ನು ಈ ವಾಟ್ಸ್ ಅಪ್ ಮೆಸೇಜ್ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭ ಮಾಡಿದ್ದಾರೆ.