ವಿದೇಶಗಳಿಂದ ನಿಷೇಧಿತ ಡ್ರಗ್ಸ್ ಅನ್ನು ಅಥ್ಲೀಟ್ಸ್ ತರುತ್ತಿದ್ದಾರೆ ಎಂದು ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ (ಎಎಫ್‌ಐ)ನ ಹಿರಿಯ ಉಪಾಧ್ಯಕ್ಷೆ, ಲಾಂಗ್ ಜಂಪ್ ದಂತಕಥೆ ಅಂಜುಬಾಬಿ ಜಾರ್ಜ್ ಭಾನುವಾರ ಗಂಭೀರ ಆರೋಪ ಮಾಡಿದ್ದಾರೆ.
ಅವರು ಎಎಫ್‌ಐನ ಎರಡು ದಿನಗಳ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ದೇಶದ ಕೆಲವು ಅಥ್ಲೀಟ್‌ಗಳು ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ ನಿಷೇಧಿತ ವಿದೇಶಿ ಡ್ರಗ್ಸ್ ಅನ್ನು ಮರಳಿ ತರುತ್ತಿದ್ದಾರೆ. ಡೋಪಿಂಗ್‌ಗೆ ಸಿಕ್ಕಿಬಿದ್ದ ಅಥ್ಲೀಟ್‌ಗಳು ವಿದೇಶದಿಂದ ಬಂದ ಅನೇಕ ನಿಷೇಧಿತ ಡ್ರಗ್‌ಗಳನ್ನು ಸೇವಿಸಿರುವುದು ದೃಢಪಟ್ಟಿದೆ. ಆ ಡ್ರಗ್ಸ್ ಭಾರತದಲ್ಲಿ ಲಭ್ಯವಿಲ್ಲ ಎಂಬ ವಿಚಾರದತ್ತ ಕೂಡ ಅಂಜು ಬಾಬಿ ಗಮನಸೆಳೆದರು.
BIG NEWS: ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರಿಗೆ ಚರ್ಚಿಸಲು ಬೇರೆ ವಿಚಾರವಿಲ್ಲವೇ….? ವಿಪಕ್ಷ ನಾಯಕನಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ತಿರುಗೇಟು
“ಇದು ಯುವ ಕ್ರೀಡಾಪಟುಗಳಿಗೆ ನಿಷೇಧಿತ ಔಷಧಗಳನ್ನು ತರಬೇತುದಾರರು ಮಾತ್ರವಲ್ಲದೆ ಕೆಲವು ಕ್ರೀಡಾಪಟುಗಳು ತರಬೇತಿಗಾಗಿ ವಿದೇಶಕ್ಕೆ ಪ್ರಯಾಣಿಸುತ್ತಾರೆ, (ಕಾರ್ಯಕ್ಷಮತೆ ಹೆಚ್ಚಿಸುವ) ಔಷಧಗಳನ್ನು ಸಂಗ್ರಹಿಸುತ್ತಾರೆ ಮತ್ತು ಇತರರಿಗೆ ವಿತರಿಸುತ್ತಾರೆ. ನಾವೂ ಇದನ್ನು ನಿಲ್ಲಿಸಬೇಕು’ ಎಂದು 2003ರ ಪ್ಯಾರಿಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಲಾಂಗ್ ಜಂಪ್‌ನಲ್ಲಿ ಕಂಚು ಗೆದ್ದಿದ್ದ ಅಂಜು ಹೇಳಿದರು.
ಎಎಫ್‌ಐ ಅಧ್ಯಕ್ಷ ಅಡಿಲ್ಲೆ ಸುಮರಿವಾಲಾ, ಪರಿಸ್ಥಿತಿ ಹೀಗೇ ಮುಂದುವರಿದರೆ ರಾಷ್ಟ್ರೀಯ ಉದ್ದೀಪನ ಔಷಧ ನಿಗ್ರಹ ಸಂಸ್ಥೆ (ನಾಡಾ) ಮೊದಲಿಗಿಂತ ಹೆಚ್ಚು ತೀವ್ರವಾದ ಡೋಪ್ ಪರೀಕ್ಷೆಗೆ ಅಥ್ಲೀಟ್‌ಗಳನ್ನು ಒಳಪಡಿಸಲಿದೆ ಎಂದು ಎಚ್ಚರಿಸಿದರು.