ಪ್ರಾಣಿಗಳೇ ಗುಣದಲ್ಲಿ ಮೇಲು, ಪ್ರಾಣಿಗಳಿಗಿರುವ ನಿಯತ್ತು ಮನುಷ್ಯನಿಗಿಲ್ಲ. ಅದರಲ್ಲೂ ಸಾಕು ಪ್ರಾಣಿ ನಾಯಿಗಳಿಗಿರುವ ಗುಣ ನಿಜಕ್ಕೂ ಗ್ರೇಟ್..ಈಜುಕೊಳಕ್ಕೆ ಬಿದ್ದ ಮಾಲೀಕನನ್ನು ಶ್ವಾನವೊಂದು ರಕ್ಷಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಾಯಿಗಳು ಮತ್ತು ಮನುಷ್ಯರ ನಡುವೆ ವಿಶೇಷ ಬಂಧವಿದೆ. ನಾಯಿಗಳನ್ನು ಮಾನವರ ಉತ್ತಮ ಸ್ನೇಹಿತರು ಎಂದು ಕರೆಯಲಾಗುತ್ತದೆ.
ಈಜುಕೊಳಕ್ಕೆ ಮಾಲೀಕ ಬಿದ್ದಂತೆ ನಟಿಸಿದ್ದಾನೆ, ವ್ಯಕ್ತಿಯೋರ್ವ ಮಾಲೀಕನನ್ನು ಈಜುಕೊಳಕೆ ತಳ್ಳಿದ್ದಾರೆ. ಇದನ್ನು ದೂರದಿಂದಲೇ ಗಮನಿಸಿದ ಶ್ವಾನ ಓಡಿ ಬಂದು ಈಜುಕೊಳಕ್ಕೆ ಜಿಗಿದು ಮಾಲೀಕನನ್ನು ನೀರಿನಿಂದ ಹೊರಗೆ ಎಳೆದಿದೆ. ಸದ್ಯ. ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.