ಚಿರತೆ ಮರಿಗೆ ಪ್ರಾಣಿ ಆರೈಕೆ ಸಿಬ್ಬಂದಿಯು ಆರೈಕೆ ಮಾಡುತ್ತಿರುವ ವಿಡಿಯೋ ಜನರ ಮನಗೆದ್ದಿದೆ. ಸ್ಮಿತ್ಸೋನಿಯನ್ ರಾಷ್ಟ್ರೀಯ ಮೃಗಾಲಯವು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಚೀತಾ ಮರಿ ಕುರಿತು ಹಂಚಿಕೊಂಡಿರುವ ವಿಡಿಯೋ ಜನರನ್ನು ವಿಸ್ಮಯಗೊಳಿಸಿದೆ.
ಈ ಸಂಸ್ಥೆಯ ಪ್ರಾಣಿಗಳ ಆರೈಕೆ ಸಿಬ್ಬಂದಿಯು ಪುಟ್ಟ ಪ್ರಾಣಿಗೆ ಬಾಟಲಿಯಲ್ಲಿ ಹಾಲುಣಿಸುವುದನ್ನು ವಿಡಿಯೋ ತೋರಿಸುತ್ತದೆ. ವಿಡಿಯೋ ಜೊತೆಗೆ ವಿವರಣೆಯನ್ನು ಸಹ ಹಂಚಿಕೊಂಡಿದ್ದಾರೆ.
“ಸ್ಮಿತ್ಸೋನಿಯನ್ ಕನ್ಸರ್ವೇಶನ್ ಬಯಾಲಜಿ ಇನ್‌ಸ್ಟಿಟ್ಯೂಟ್‌ನ ಪ್ರಾಣಿ ಸಂರಕ್ಷಣಾ ಸಿಬ್ಬಂದಿಯು ಗಂಡು ಚಿರತೆಯ ಮರಿಯನ್ನು ಇನ್ನೊಂದು ಪ್ರಾಣಿ ಸಂಗ್ರಹಾಲಯದಲ್ಲಿ ಸಾಕಿದ ಚಿರತೆಯ ತಾಯಿಯೊಂದಿಗೆ ಇಡುವ ಮೊದಲು ಹಲವು ವಾರಗಳ ಕಾಲ ಆರೈಕೆ ಮಾಡಲಾಗುತ್ತಿದೆ” ಎಂದು ಅವರು ಬರೆದಿದ್ದಾರೆ.
ʼಕೋಟ್ಯಾಧಿಪತಿʼಗಳಾಗಿದ್ದಾರೆ ಈ ಐಟಿ ಕಂಪನಿಯ 500 ಕ್ಕೂ ಅಧಿಕ ಉದ್ಯೋಗಿಗಳು..!
ಸೆಪ್ಟೆಂಬರ್ 16 ರಂದು ಜನಿಸಿದ ಮೂರು ಮರಿಗಳಲ್ಲಿ ಇದು ಕೂಡ ಒಂದು. ಒಂದು ಮರಿ ಸತ್ತಿದೆ ಮತ್ತು ಇನ್ನೊಂದು ಮರಿ ಕೆಲವು ನಿಮಿಷಗಳ ನಂತರ ಬದುಕಲಿಲ್ಲ. ಇನ್ನು ಒಂದು ಮರಿ ಮಾತ್ರ ಉಳಿದುಕೊಂಡಿದ್ದು ಸಿಬ್ಬಂದಿಯ ಆರೈಕೆಯಲ್ಲಿದೆ ಎಂದು ವಿವರಿಸಲಾಗಿದೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದ್ದು, 60,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.
https://www.youtube.com/watch?v=YcCTvEfq2CQ