alex Certify ಮಾಜಿ ಗೃಹ ಸಚಿವ ಅನಿಲ್​ ದೇಶ್​ಮುಖ್​​​ ನವೆಂಬರ್​ 6 ರ ವರೆಗೆ ಇಡಿ ವಶಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಗೃಹ ಸಚಿವ ಅನಿಲ್​ ದೇಶ್​ಮುಖ್​​​ ನವೆಂಬರ್​ 6 ರ ವರೆಗೆ ಇಡಿ ವಶಕ್ಕೆ

ಮಹಾರಾಷ್ಟ್ರ ಮಾಜಿ ಗೃಹ ಸಚಿವ ಹಾಗೂ ಎನ್​ಸಿಪಿ ಹಿರಿಯ ನಾಯಕ ಅನಿಲ್​ ದೇಶ್​ಮುಖ್​​ರನ್ನು ನವೆಂಬರ್​ 6ರವರೆಗೆ ಇಡಿ ಕಸ್ಟಡಿಗೆ ನೀಡಲಾಗಿದೆ.

ಎನ್​ಸಿಪಿ ಸ್ಥಾಪಕ ಹಾಗೂ ಅಧ್ಯಕ್ಷ ಶರದ್​ಪವಾರ್​ ಆಪ್ತರಾಗಿರುವ ಅನಿಲ್​ ದೇದೇಶಮುಖ್ ಗೆ ಜಾರಿ ನಿರ್ದೇಶನಾಲಯ ಈ ಹಿಂದೆ ಐದು ಬಾರಿ ಸಮನ್ಸ್​ ನೀಡಿತ್ತು. ಸತತ 12 ಗಂಟೆಗಳ ವಿಚಾರಣೆ ಬಳಿಕ ಅನಿಲ್​ ದೇಶಮುಖ್​​ರನ್ನ ಇಡಿ ಬಂಧಿಸಿತ್ತು.

ಲಂಚದ ಆರೋಪವನ್ನು ಎದುರಿಸುತ್ತಿರುವ ಅನಿಲ್​ ದೇಶ್​ಮುಖ್​ ಇಡಿಯ ಪ್ರಶ್ನೆಗೆ ಸೂಕ್ತ ಉತ್ತರ ನೀಡುವಲ್ಲಿ ವಿಫಲರಾದ ಕಾರಣ ಅವರನ್ನು ಬಂಧಿಸಿರುವುದಾಗಿ ಹೇಳಿತ್ತು. ಲಂಚದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದೇಶ್​ಮುಖ್​​ ಈ ವರ್ಷದ ಆರಂಭದಲ್ಲಿಯೇ ಗೃಹ ಸಚಿವನ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು.

ಮಾಜಿ ಸಚಿವ ಅನಿಲ್​ ದೇಶ್​ಮುಖ್​ ವಿರುದ್ಧ ಮುಂಬೈನ ಮಾಜಿ ಪೊಲೀಸ್​ ಉನ್ನತಾಧಿಕಾರಿ ಪರಮ್​ ಬೀರ್​ ಸಿಂಗ್​ ಲಂಚದ ಆರೋಪ ಮಾಡಿದ್ದರು. ಈ ಸಂಬಂಧ ಇಡಿ ಅನಿಲ್​ ದೇಶ್​ಮುಖ್​ಗೆ ಸಾಕಷ್ಟು ಬಾರಿ ಸಮನ್ಸ್​ ನೀಡಿತ್ತು. ಆದರೆ ಈ ಸಮನ್ಸ್​ ರದ್ದುಮಾಡುವಂತೆ ಕೋರಿ ಅನಿಲ್​ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ನ್ಯಾಯಾಲಯದಲ್ಲಿ ದೇಶ್​ಮುಖ್​​ಗೆ ಹಿನ್ನಡೆ ಉಂಟಾಗಿತ್ತು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...