ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ನಾನು ಯಾರ ಪರವೂ ಅಲ್ಲ, ಯಾರ ವಿರೋಧವೂ ಅಲ್ಲ ಎಂದು ಹೇಳುವ ಮೂಲಕ ಶಾಸಕ ಅನಿಲ್ ಬೆನಕೆ ಅಚ್ಚರಿ ಮೂಡಿಸಿದ್ದಾರೆ. ಇಷ್ಟು ದಿನಗಳ ಕಾಲ ಯಡಿಯೂರಪ್ಪರೇ ನಮ್ಮ ನಾಯಕ ಎಂತಿದ್ದ ಅನಿಲ್ ಬೆನಕೆ ಇದೀಗ ಸಡನ್ ಯೂ ಟರ್ನ್ ಹೊಡೆದಿದ್ದಾರೆ.
ಬೆಳಗಾವಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಹೈಕಮಾಂಡ್ ಯಾವ ನಾಯಕನ ಹೆಸರನ್ನ ಸೂಚಿಸುತ್ತೋ ಅವರ ಪರವಾಗಿ ನಾನು ಕೆಲಸ ಮಾಡುತ್ತೇನೆ. ಅದು ಯಡಿಯೂರಪ್ಪರೇ ಆಗಿರಬಹುದು ಅಥವಾ ಬೇರೆ ನಾಯಕರೂ ಸಹ ಆಗಿರಬಹುದು. ಬಿಜೆಪಿ ಹೈಕಮಾಂಡ್ ತುಂಬಾನೇ ಸ್ಟ್ರಾಂಗ್ ಆಗಿದೆ. ಅದು ಸೂಕ್ತವಾದ ನಿರ್ಣಯವನ್ನೇ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಇನ್ನು ಶಾಸಕರ ಜೊತೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸಭೆ ವಿಚಾರವಾಗಿಯೂ ಮಾತನಾಡಿದ ಅವ್ರು, ಬೆಳಗಾವಿಯಲ್ಲಿ ಸೋಮವಾರದವರೆಗೂ ಲಾಕ್ಡೌನ್ ಮುಂದುವರಿದಿದೆ. ನಾನು ಬೆಂಗಳೂರಿಗೆ ಹೋಗುವ ಪ್ರಶ್ನೆಯೇ ಇಲ್ಲ. ಬಿಜೆಪಿಗೆ ಒಂದು ಹೈಕಮಾಂಡ್ ಇದೆ. ಭಿನ್ನಾಭಿಪ್ರಾಯ ಇದ್ದವರು ನೇರವಾಗಿ ಹೈಕಮಾಂಡ್ ಬಳಿ ಹೋಗಬೇಕು. ಅದನ್ನ ಬಿಟ್ಟು ಒಟ್ಟಾಗಿ ಭಿನ್ನಮತ ವ್ಯಕ್ತಪಡಿಸೋದು ತಪ್ಪು ಎಂಬ ಅಭಿಪ್ರಾಯ ಹೊರಹಾಕಿದ್ರು.