ಹೈದರಾಬಾದ್ ಮಹಿಳೆಯೊಬ್ಬಳು ತನ್ನ ಗಂಡನ ಮೇಲೆ ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆಂಬ ಸಿಟ್ಟಿನಲ್ಲಿ ರಿವೆಂಜ್ ತೀರಿಸಿಕೊಳ್ಳಲು, ಗಂಡನ ಪ್ರಿಯತಮೆ ಮೇಲೆ ಅತ್ಯಾಚಾರಕ್ಕೆ ನಾಲ್ಕು ಪುರುಷರನ್ನು ನೇಮಿಸಿದ ಆಘಾತಕಾರಿ ಘಟನೆ ನಡೆದಿದೆ.
ಹೈದರಾಬಾದ್‌ನ ಕೊಂಡಾಪುರ ಪ್ರದೇಶದಲ್ಲಿ ಗಾಯತ್ರಿ ಎಂಬ ಮಹಿಳೆ ಇಂತಹದ್ದೊಂದು ಯೋಜನೆ ರೂಪಿಸಿದ್ದು ಬೆಳಕಿಗೆ ಬಂದಿದೆ. ಅದಲ್ಲದೇ ಘಟನೆಯನ್ನು ವಿಡಿಯೋ ರೆಕಾರ್ಡ್ ಕೂಡ ಮಾಡಿಸಿದ್ದಾಳೆ
ಪೊಲೀಸರ ಪ್ರಕಾರ, ಗಾಯತ್ರಿ, ಆಕೆಯ ಪತಿ ಮತ್ತು ಆತನ ಪ್ರಿಯತಮೆ ಕೊಂಡಾಪುರದ ಒಂದೇ ಕಾಲೋನಿಯಲ್ಲಿ ನೆಲೆಸಿದ್ದಾರೆ. ಪತಿ ಮತ್ತು ಪ್ರಿಯತಮೆ ಇಬ್ಬರೂ ಸಿವಿಲ್ ಸರ್ವೀಸ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವಾಗ ಸ್ನೇಹಿತರಾಗಿದ್ದರು.
BREAKING: ಜೂನ್ 2 ಕ್ಕೆ ಹಾರ್ದಿಕ್ ಪಟೇಲ್ ಬಿಜೆಪಿ ಸೇರ್ಪಡೆ
ಆಕೆಯ ಅನಾರೋಗ್ಯದ ಕಾರಣ ಗಾಯತ್ರಿಯು ಗಂಡನ ಸ್ನೇಹಿತೆಯನ್ನು ಕೊಂಡಾಪುರದಲ್ಲಿರುವ ತನ್ನ ಮನೆಗೆ ಸಹಾಯ ಮಾಡಲು ಆಹ್ವಾನಿಸಿದ್ದಳು. ಆಕೆ ಫೆಬ್ರವರಿ 2022 ರವರೆಗೆ ದಂಪತಿಗಳೊಂದಿಗೆ ಇದ್ದಳು. ಆದರೆ ಗಾಯತ್ರಿ ಇಬ್ಬರೂ ಅನೈತಿಕ ಸಂಬಂಧದಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಿ ಗಚ್ಚಿಬೌಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇಷ್ಟಾದರೂ ಅವಳು ಸಮಾಧಾನಗೊಳ್ಳಲಿಲ್ಲ ಮತ್ತು ಗಂಡನ ಪ್ರಿಯತಮೆ ಮೇಲೆ ಸೇಡು ತೀರಿಸಿಕೊಳ್ಳಲು ವಿಶೇಷ ಯೋಜನೆ ರೂಪಿಸಿದ್ದಾಳೆ.
ಪ್ರಕರಣ ಹಿಂಪಡೆಯುವ ವಿಚಾರವಾಗಿ ಚರ್ಚಿಸುವ ನೆಪದಲ್ಲಿ ಪತಿಯ ಪ್ರಿಯತಮೆ ಹಾಗೂ ಆಕೆಯ ಕುಟುಂಬಸ್ಥರನ್ನು ಮನೆಗೆ ಆಹ್ವಾನಿಸಿ, ಅವರೊಂದಿಗೆ ಸ್ವಲ್ಪ ಸಮಯದವರೆಗೆ ಚರ್ಚೆ ನಡೆಸಿದ್ದಾರೆ. ನಂತರ ಪತಿಯ ಪ್ರಿಯತಮೆಯನ್ನು ಮತ್ತೊಂದು ಕೋಣೆಗೆ ಕರೆದೊಯ್ದು, ಅಲ್ಲಿ ನಾಲ್ವರು ಬಾಡಿಗೆ ವ್ಯಕ್ತಿ ಸಹಾಯದಿಂದ ಹಲ್ಲೆ ನಡೆಸಿದ್ದಾರೆ.
ಆಕೆಯ ಬಾಯಿಯನ್ನು ಬಟ್ಟೆಯಿಂದ ಬಿಗಿದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಘಟನೆಯನ್ನು ಗಾಯತ್ರಿ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾಳೆ. ಈ ಘಟನೆಯನ್ನು ಯಾರಿಗಾದರೂ ಬಹಿರಂಗಪಡಿಸಿದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡುವುದಾಗಿ ಗಾಯತ್ರಿ ಬೆದರಿಕೆ ಹಾಕಿದ್ದಾಳೆ.
ತೀವ್ರವಾಗಿ ಗಾಯಗೊಂಡ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಗಾಯತ್ರಿ ಹಾಗೂ ನಾಲ್ವರು ಯುವಕರು ಸೇರಿದಂತೆ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.