ನಟ ಪ್ರಭಾಸ್ ಅಭಿನಯದ ‘ಸಾಹೋ’ ಚಿತ್ರದ ಕ್ಲಿಪ್ಪಿಂಗ್ ಒಂದಕ್ಕೆ ಸಿಡಿದೆದ್ದಿರುವ ಅಭಿಮಾನಿಗಳು ಟ್ವಿಟರ್ನಲ್ಲಿ ‘ಅನ್ಸಬ್ಸ್ಕ್ರೈಬ್ ನೆಟ್ಫ್ಲಿಕ್ಸ್’ ಟ್ರೆಂಡಿಂಗ್ ಶುರು ಮಾಡಿದ್ದಾರೆ. ನೆಟ್ಫ್ಲಿಕ್ಸ್ ಇಂಡೋನೇಷ್ಯಾ ಖಾತೆಯಿಂದ ಹಂಚಿಕೊಂಡ ‘ಸಾಹೋ’ ಕ್ಲಿಪ್ನಿಂದ ಪ್ರಭಾಸ್ ಅಭಿಮಾನಿಗಳು ಕಿಡಿ ಕಾರುತ್ತಿದ್ದಾರೆ.
ಈ ಕ್ಲಿಪ್ಪಿಂಗ್ ಜಾಗತಿಕವಾಗಿ ಟ್ರೋಲಿಂಗ್ಗೆ ಒಳಗಾದ ಬಳಿಕ ಇಂಥದ್ದೊಂದು ಟ್ರೆಂಡಿಂಗ್ ಶುರುವಾಗಿದೆ. ಅಷ್ಟಕ್ಕೂ ಈ ಕ್ಲಿಪ್ಪಿಂಗ್ನಲ್ಲಿ ಇರುವುದು ಏನೆಂದರೆ, ನಾಯಕ ಪ್ರಭಾಸ್ ಸ್ಕೈಡೈವಿಂಗ್ ಮಾಡಲು ಪ್ರಯತ್ನಿಸುತ್ತಿರುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಅಲ್ಲಿ ನಾಯಕ ಬಂಡೆಯಿಂದ ಒಂದು ಚೀಲವನ್ನು ಕೆಳಕ್ಕೆ ಎಸೆಯುತ್ತಾರೆ ನಂತರ ಧುಮುಕಿ ಆ ಚೀಲವನ್ನು ಹಿಡಿದುಕೊಳ್ಳುತ್ತಾರೆ, ನಂತರ ಆ ಚೀಲವು ಪ್ಯಾರಾಚೂಟ್ ರೂಪದಲ್ಲಿ ತೆರೆದುಕೊಳ್ಳುತ್ತದೆ. ಈ ಮೂಲಕ ನಾಯಕ ಕೆಳಗೆ ಇಳಿಯುವಲ್ಲಿ ಯಶಸ್ವಿಯಾಗುತ್ತಾನೆ.
ಈ ವಿಡಿಯೋ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು, ಇದೆಂಥ ವಿಚಿತ್ರನಪ್ಪ ಎಂದು ಕಮೆಂಟ್ಗಳ ಸುರಿಮಳೆಯಾಗುತ್ತಿದೆ. ನಾಯಕನನ್ನು ಈ ರೀತಿ ವಿಚಿತ್ರವಾಗಿ ತೋರಿಸಲಾಗಿದೆ ಎಂದು ಜನರು ನಗುತ್ತಿದ್ದಾರೆ. ಈ ಮೂಲಕ ತಮ್ಮ ನಾಯಕನಿಗೆ ನೆಟ್ ಫ್ಲಿಕ್ಸ್ ಅವಮಾನ ಮಾಡಿದೆ ಎಂದು ಅಭಿಮಾನಿಗಳು ಅದನ್ನು ಬಾಯ್ಕಾಟ್ ಮಾಡಲು ಶುರು ಮಾಡಿಕೊಂಡಿದ್ದಾರೆ.
ಅಂದಹಾಗೆ ಸಾಹೋದ ಕಥಾವಸ್ತು ಪೊಲೀಸ್ ಇಲಾಖೆ ಮತ್ತು ಭೂಗತ ಜಗತ್ತಿನ ಡಾನ್ಗಳ ನಡುವಿನ ಕಣ್ಣಾ ಮುಚ್ಚಾಲೆ ಆಟ. ಈ ಸ್ಟೋರಿಯಲ್ಲಿ ನಟ ಪ್ರಭಾಸ್ ಪೊಲೀಸನೋ ಅಥವಾ ಕಳ್ಳನೋ ಎನ್ನುವುದೇ ಚಿತ್ರದ ಮೇಜರ್ ಟ್ವಿಸ್ಟ್.
https://twitter.com/honestolic/status/1588935172451622912?ref_src=twsrc%5Etfw%7Ctwcamp%5Etweetembed%7Ctwterm%5E1588935172451622912%7Ctwgr%5E11504a4a2138b203ca12e8fde6c3a6d47c20a3b2%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fangry-prabhas-fans-delete-netflix-accounts-after-saaho-scene-gets-widely-trolled-6321751.html