ಇಂದು ಅಂಗಾರಕ ಸಂಕಷ್ಟಿ. ಇಂದು ಗಣೇಶನಿಗೆ ವಿಶೇಷ ಪೂಜೆ ನಡೆಯುತ್ತದೆ. ಅಂಗಾರಕ ಸಂಕಷ್ಟಿ ಹಿಂದೂ ಧರ್ಮದಲ್ಲಿ ಬಹಳ ಮುಖ್ಯ.ಮಂಗಳವಾರದಂದು ಸಂಕಷ್ಟಿ ಬಂದರೆ ಅದನ್ನು ಅಂಗಾರಕ ಎಂದು ಕರೆಯಲಾಗುತ್ತದೆ. ಜೀವನದ ಅನೇಕ ಸಮಸ್ಯೆಗಳನ್ನು ಇಂದು ಪರಿಹರಿಸಿಕೊಳ್ಳಬಹುದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.
ಅಂಗಾರಕ ಸಂಕಷ್ಟಿ ದಿನ ಗಣಪತಿ ಹಾಗೂ ಹನುಮಂತನ ಪೂಜೆ ಮಾಡಬೇಕು. ಅಂಗಾರಕ ಸಂಕಷ್ಟಿ ದಿನ ಹನುಮಂತನಿಗೆ ಸಿಂಧೂರವನ್ನು ಅರ್ಪಿಸುವುದರಿಂದ ಮಂಗಳ ದೋಷ ನಿವಾರಣೆಯಾಗುತ್ತದೆ. ನಿಂತ ಕೆಲಸ ಮತ್ತೆ ಶುರುವಾಗುತ್ತದೆ.
ಗಣೇಶ ಯಂತ್ರವನ್ನು ಜ್ಯೋತಿಷ್ಯದಲ್ಲಿ ಬಹಳ ಅದ್ಭುತವೆಂದು ಪರಿಗಣಿಸಲಾಗುತ್ತದೆ. ಅಂಗಾರಕ ಸಂಕಷ್ಟಿ ದಿನದಂದು ಈ ಯಂತ್ರವನ್ನು ಸ್ಥಾಪಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ. ನಕಾರಾತ್ಮಕ ಶಕ್ತಿಯ ನಾಶವಾಗುತ್ತದೆ. ಇಂದು ಗಣೇಶನಿಗೆ ದೂರ್ವೆ ಅರ್ಪಿಸಬೇಕು. ಅಂಗಾರಕ ಸಂಕಷ್ಟಿಯಂದು 21 ಗಂಟುಗಳ ದೂರ್ವೆಯನ್ನು ಅರ್ಪಿಸಬೇಕು. ಗಣೇಶನ 21 ನಾಮಗಳನ್ನು ಒಟ್ಟಿಗೆ ಜಪಿಸಬೇಕು. ಅಲ್ಲದೆ ಮೋದಕವನ್ನು ಅರ್ಪಿಸಬೇಕು. ಇದ್ರಿಂದ ಇಷ್ಟಾರ್ಥ ನೆರವೇರಲಿದೆ.
ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಬೇಕು. ಗಣೇಶನ ದರ್ಶನ ಪಡೆಯಬೇಕು. ಈ ದಿನ ಗಣೇಶನ ಪ್ರಾರ್ಥನೆ ಮಾಡಿ, ಉಪವಾಸ ಮಾಡುವುದ್ರಿಂದ ವಿಶೇಷ ಫಲ ಲಭಿಸುತ್ತದೆ ಎಂಬ ನಂಬಿಕೆಯಿದೆ.