ಬೆಳಗಾವಿ: ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಶಿಕ್ಷಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ ನಡೆದಿದೆ.
ಅಂಗನವಾಡಿಯ ಅಡುಗೆ ಸಹಾಯಿಯಕಿಯ ಪತಿಯೇ, ಶಿಕ್ಷಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಗನವಾಡಿ ಕೇಂದ್ರದ ಅಡುಗೆ ಸಿಬ್ಬಂದಿ ಸಾವಿತ್ರಿ ಕರ್ಲಟ್ಟಿ ಎಂಬುವವರಿಗೆ ಅಂಗನವಾಡಿ ಶೌಚಾಲಯ ಸ್ವಚ್ಛ ಮಾಡುವಂತೆ ಅಂಗನವಾಡಿ ಶಿಕ್ಷಕಿ ಹೇಳಿದ್ದರಂತೆ. ಈ ವಿಷಯವನ್ನು ಅಡುಗೆ ಸಿಬ್ಬಂದಿ ಸಾವಿತ್ರಿ ಕರ್ಲಟ್ಟಿ ತನ್ನ ಪತಿ ಸದ್ರಾಯಿಗೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಆತ ಅಂಗನವಾಡಿ ಕೇಂದ್ರಕ್ಕೆ ಧಾವಿಸಿ ಬಂದು ತನ್ನ ಪತ್ನಿಗೆ ಶೌಚಾಲಯ ಕ್ಲೀನ್ ಮಾಡಲು ಹೇಳ್ತೀಯಾ ಎಂದು ಅವಾಚ್ಯವಾಗಿ ನಿಂದಿಸಿದ್ದಾನೆ. ಅಷ್ಟೇ ಅಲ್ಲ ಶಿಕ್ಷಕಿ ಸೀರೆ ಎಳೆದು ಮಾನಭಂಗಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ.
ನೊಂದ ಶಿಕ್ಷಕಿ ಆತ್ಮಹತ್ಯೆಗೂ ಯತ್ನಿಸಿದ್ದರು ಎನ್ನಲಾಗಿದೆ. ಸದ್ಯ ಪ್ರಕರಣ ಸಂಅಬ್ಂಧ ರಾಯಬಾಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.