ಅಂಗನವಾಡಿಯಲ್ಲಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಬಿಐಎಸ್ ಸೂಚಿತ ಗುಣಮಟ್ಟದ ಆಧಾರದಲ್ಲಿ ಪೌಷ್ಟಿಕ ಆಹಾರ ನೀಡಲು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೊಸ ಮೆನು ಸಿದ್ಧಪಡಿಸಿ ಅನುಷ್ಠಾನಕ್ಕೆ ತಂದಿದೆ.
ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯೊಂದಿಗೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ತಾಂತ್ರಿಕ ಸಮಿತಿ ಶಿಫಾರಸ್ಸಿನ ಅನ್ವಯ ನಿಗದಿತ ವಿಟಮಿನ್ಸ್ ಮಿನರಲ್ ಗಳನ್ನು ಒಳಗೊಂಡಂತೆ ಪ್ರತಿದಿನ ಸಾಮಾನ್ಯ ಮಗುವಿಗೆ 140 ಗ್ರಾಂ, ಅಪೌಷ್ಟಿಕತೆಯುಳ್ಳ ಮಗುವಿಗೆ 225 ಗ್ರಾಂ ಪೌಷ್ಟಿಕ ಆಹಾರ ನೀಡಲಾಗುವುದು.
ಗೋಧಿ ಉಪ್ಪಿಟ್ಟು, ಮೊಟ್ಟೆ, ಅನ್ನ –ಸಾಂಬಾರು, ಲಡ್ಡು ಕೊಡಲಾಗುವುದು. ಮಧ್ಯಾಹ್ನದ ಬಿಸಿ ಊಟಕ್ಕೆ ಅಂಗನವಾಡಿ ಕೇಂದ್ರಗಳಿಗೆ ಗರ್ಭಿಣಿಯರು, ಬಾಣಂತಿಯರು ಆಗಮಿಸುತ್ತಾರೆ. ಉದ್ಯೋಗಸ್ಥ ಮಹಿಳೆಯರು, ಅನಾರೋಗ್ಯದಿಂದ ಬಳಲುತ್ತಿರುವವರು, ಇತರೆ ಅನಿವಾರ್ಯ ಕಾರಣಗಳಿಂದ ಅಂಗನವಾಡಿಗಳಿಗೆ ಬರಲು ಸಾಧ್ಯವಾಗದವರಿಗೆ ಅವರ ಮನೆಗೆ ಆಹಾರ ಪದಾರ್ಥ ತಲುಪಿಸಲಾಗುತ್ತದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪೂರಕ ಪೌಷ್ಟಿಕ ಆಹಾರವನ್ನು 60 ಸಾವಿರ ಅಂಗನವಾಡಿ ಕೇಂದ್ರಗಳಿಗೆ ಬಿಐಎಸ್ ಪರವಾನಿಗೆ ಪಡೆದ ಮಹಿಳಾ ಗುಂಪುಗಳ ಸಹಯೋಗದೊಂದಿಗೆ ಮಹಿಳಾ ಪೂರಕ ಉತ್ಪಾದನೆ ಮತ್ತು ತರಬೇತಿ ಕೇಂದ್ರಗಳ ಮೂಲಕ ಐಸಿಡಿಎಸ್ ಯೋಜನೆಯಡಿ ಆಹಾರ ತಯಾರಿಸಿ ಪೂರೈಕೆ ಮಾಡುತ್ತಿದೆ.
ಮಧ್ಯಾಹ್ನದ ಊಟಕ್ಕೆ ಮೂರು ದಿನ ಗೋಧಿ ಉಪ್ಪಿಟ್ಟು, ಮೂರು ದಿನ ಅನ್ನ, ಸಾಂಬಾರ್, ವಾರಕ್ಕೆ ಎರಡು ದಿನ ಮೊಟ್ಟೆ, ಬೆಳಗ್ಗಿನ ಉಪಹಾರಕ್ಕೆ ವಾರದಲ್ಲಿ ಐದು ದಿನ ಮಿಲೆಟ್ ಲಡ್ಡು, ಹಾಲು ಮೊದಲಾದವುಗಳನ್ನು ನೀಡಲಾಗುವುದು.