![](https://kannadadunia.com/wp-content/uploads/2020/05/Anganawadi1572001912.jpg)
ಬೆಂಗಳೂರು: ನವೆಂಬರ್ 8 ರಿಂದ ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ದಿನಕ್ಕೆ ಎರಡು ಗಂಟೆಗಳ ಕಾಲ ಅಂಗನವಾಡಿಗಳು ಕಾರ್ಯನಿರ್ವಹಿಸಲಿವೆ. ಎಲ್ಕೆಜಿ-ಯುಕೆಜಿ ಆರಂಭಿಸಲು ಅನುಮತಿ ನೀಡಿಲ್ಲ.
ಅಂಗನವಾಡಿ ಜೊತೆಗೆ ಎಲ್ಕೆಜಿ-ಯುಕೆಜಿ ಸೇರಿದಂತೆ ನರ್ಸರಿ ಶಾಲೆಗಳ ಆರಂಭಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಮಾಂಟೆಸರಿಗಳು ಒತ್ತಾಯ ಮಾಡಿದ್ದರೂ ಸರ್ಕಾರ ಅಂಗನವಾಡಿಗೆ ಮಾತ್ರ ಅನುಮತಿ ನೀಡಿದೆ.
ರಾಜ್ಯಾದ್ಯಂತ 61,227 ಮುಖ್ಯ ಅಂಗನವಾಡಿ ಕೇಂದ್ರಗಳು ಮತ್ತು 3331 ಮಿನಿ ಅಂಗನವಾಡಿ ಕೇಂದ್ರಗಳು ಆರಂಭವಾಗಲಿವೆ. 3 ರಿಂದ 6 ವರ್ಷದೊಳಗಿನ ಸುಮಾರು 15.94 ಲಕ್ಷ ಮಕ್ಕಳು ಇದ್ದಾರೆ. ಕೊರೋನಾ ಕಾರಣದಿಂದ ಕಳೆದ 18 ತಿಂಗಳಿನಿಂದ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಲಾಗಿತ್ತು. ಈಗ ಪುನಾರಂಭಿಸಲು ಸರ್ಕಾರ ಅನುಮತಿ ನೀಡಿ ಮಾರ್ಗಸೂಚಿ ಬಿಡುಗಡೆ ಮಾಡಿದೆ.