ನವದೆಹಲಿ: ಅರ್ಹ ಫಲಾನುಭವಿಗಳಿಗೆ ಅಂಗನವಾಡಿಯಲ್ಲಿ ಸೇವೆ ಹಾಗೂ ಸೌಲಭ್ಯ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಸ್ಥಳೀಯ ಅಂಗನವಾಡಿ ಕೇಂದ್ರಗಳಲ್ಲಿ ಫಲಾನುಭವಿಗಳು ಆಧಾರ್ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದಿಂದ ಮಂಗಳವಾರ ಬಿಡುಗಡೆಯಾದ ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2 ನೀತಿಯ ನೂತನ ಮಾರ್ಗಸೂಚಿಗಳ ಕುರಿತಾಗಿ ಸ್ಪಷ್ಟನೆ ನೀಡಲಾಗಿದೆ.
ಫಲಾನುಭವಿಗಳು ಜಾತಿ, ಧರ್ಮ, ಆದಾಯ ಗಳಿಕೆ ಮಾನದಂಡಗಳ ತಾರತಮ್ಯ ರಹಿತವಾಗಿ ಅಂಗನವಾಡಿ ಸೇವೆಗಳನ್ನು ಪಡೆಯಬಹುದು. ಮಕ್ಕಳು ಅಂಗನವಾಡಿ ಸೌಲಭ್ಯ ಪಡೆದುಕೊಳ್ಳಲು ಅವರ ಆಧಾರ್ ಕಾರ್ಡ್ ಕಡ್ಡಾಯ ಆಗಿರುವುದಿಲ್ಲ. ತಾಯಿಯ ಆಧಾರ್ ಕಾರ್ಡ್ ನೋಂದಣಿಯಾಗಿರಬೇಕು. 14 ರಿಂದ 18 ವರ್ಷದ ಹೆಣ್ಣು ಮಕ್ಕಳ ಯೋಜನೆಯ ಲಾಭ ಪಡೆದುಕೊಳ್ಳಲು ಆಧಾರ್ ಸಂಖ್ಯೆ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ ಎಂದು ಹೇಳಲಾಗಿದೆ.