ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಯರ ಹುದ್ದೆಯ ನೇಮಕಾತಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆ 1 ಹುದ್ದೆ, 3 ಮಿನಿ ಕಾರ್ಯಕರ್ತೆ ಮತ್ತು 17 ಸಹಾಯಕಿಯರ ಹುದ್ದೆ ಖಾಲಿ ಇದ್ದು ಅರ್ಜಿಯನ್ನು ಜು.13 ರಿಂದ ಆಗಸ್ಟ್ 13 ರ ಒಳಗೆ ಆನ್ಲೈನ್ ಮೂಲಕ ವೆಬ್ಸೈಟ್ anganawadirecruit.kar.nic.in ಇಲ್ಲಿ ಸಲ್ಲಿಸಬಹುದು.
18 ರಿಂದ 35 ವರ್ಷದೊಳಗಿನ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ವಿದ್ಯಾರ್ಹತೆ ಎಸ್ಎಸ್ಎಲ್ಸಿ ಉತ್ತೀರ್ಣರಾಗಿರಬೇಕಾಗಿದ್ದು, ಸಹಾಯಕಿಯರ ಹುದ್ದೆಗೆ ಕನಿಷ್ಟ 4ನೇ ತರಗತಿ ಗರಿಷ್ಟ 9ನೇ ತರಗತಿ ಆಗಿದೆ.
ಅಂಗನವಾಡಿ ಕಾರ್ಯಕರ್ತೆ ವಿವರ:
ತ್ಯಾಜವಳ್ಳಿ, ಭಂಡಾರಿ ಕ್ಯಾಂಪ್ ಮಿನಿ, ಜ್ಯೋತಿನಗರ ಮಿನಿ, ಬಿದರೆ ರೈಲ್ವೇಸ್ಟೇಷನ್ ಮಿನಿ.
ಅಂಗನವಾಡಿ ಸಹಾಯಕಿಯರ ವಿವರ:
ಕಲ್ಲೂರು, ಹೊಳೆಬೆಳಗಲು, ಗಾಜನೂರು-1, ಕುಸ್ಕೂರು, ಮುದುವಾಲ, ಚಿಕ್ಕದಾನವಂದಿ, ದುಮ್ಮಳ್ಳಿ-1, ಸಂತೆಕಡೂರು-2, ದೊಡ್ಡಿಮಟ್ಟಿ, ಘಾಟೆತೆವರು, ತಮ್ಮಡಿಹಳ್ಳಿ, ರಾಜೀವ್ಗಾಂಧಿ ಬಡಾವಣೆ, ಮಿಳಘಟ್ಟ-1, ಟಿಪ್ಪುನಗರ-2, ಶಾಂತಿನಗರ-3, ಗುರುಪುರ, ಪುರಲೆ.
ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ದಿ ಯೋಜನಾ ಕಚೇರಿ, 1ನೇ ತಿರುವು, ಬಸವನಗುಡಿ, ಆಫೀಸರ್ಸ್ ಕ್ಲಬ್ ಪಕ್ಕ, ಶಿವಮೊಗ್ಗ ಇವರನ್ನು ಸಂಪರ್ಕಿಸಬಹುದೆಂದು ಶಿವಮೊಗ್ಗ ಸಿಡಿಪಿಓ ತಿಳಿಸಿದ್ದಾರೆ.