
ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಪಟಾಕಿ ಗೋಡೌನ್ ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 14 ಜನರು ಸಜೀವ ದಹನಗೊಂಡಿರುವ ಘಟನೆ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು ಭೇಟಿ ನೀಡಿದ್ದಾರೆ.
ಅತ್ತಿಬೆಲೆಯ ಪಟಾಕಿ ಗೋಡೌನ್ ನಲ್ಲಿ ನಿನ್ನೆ ಸಂಜೆ ಪಟಾಕಿ ಅನ್ ಲೋಡ್ ಮಾಡುವಾಗ ಅಗ್ನಿ ಆಕಸ್ಮಿಕ ಸಂಭವಿಸಿತ್ತು. ಇಡೀ ಪಟಾಕಿ ಗೋಡೌನ್ ಬೆಂಕಿಯಲ್ಲಿ ಹೊತ್ತಿ ಉರಿದಿತ್ತು. ದುರಂತದಲ್ಲಿ 14 ಜನರು ಸಜೀವ ದಹನವಾಗಿದ್ದರು. ಹಲವರು ಗಾಯಗೊಂಡಿದ್ದರು.
ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಎಂ ಹಾಗೂ ಡಿಸಿಎಂಗೆ ಸಚಿವರಾದ ರಾಮಲಿಂಗಾ ರೆಡ್ದಿ, ಭೈರತಿ ಸುರೇಶ್, ಶಾಸಕ ಸೋಮಶೇಖರ್ ಸಾಥ್ ನೀಡಿದರು. ಸ್ಥಳದಲ್ಲಿದ್ದ ಡಿಜಿ-ಐಜಿಪಿ ಹಾಗೂ ಪೊಲೀಸ್ ಅಧಿಕಾರಿಗಳಿಂದ ದುರಂತದ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ಸಂಗ್ರಹಿಸಿದರು.