
ಬೆಂಗಳೂರು: ವ್ಯಕ್ತಿಯೋರ್ವ ಏಳನೀರು ಕುಡಿಯುತ್ತಿದ್ದ ಇಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಬಳಿಕ ವಿದ್ಯುತ್ ತಂತಿ ಹಿಡಿದು ಎಲ್ಲರನ್ನು ಹೆದರಿಸಿ ಹುಚ್ಚಾಟ ಮೆರೆದಿರುವ ಘಟನೆ ಬೆಂಗಳೂರಿನ ಆನೇಕಲ್ ನಲ್ಲಿ ನಡೆದಿದೆ.
ಜಿಗಣಿ ಬಳಿಯ ಡಬಲ್ ರೋಡ್ ರಸ್ತೆಯ ಒಟಿಸಿ ಸರ್ಕಲ್ ಬಳಿ ಈ ಘಟನೆ ನಡೆದಿದೆ. ಜಾರ್ಖಂಡ್ ನ ರಾಂಚಿ ಮೂಲದ ರಾಜು ಮುಂಡಾ ಎಂಬಾತ ಈ ಹುಚ್ಚಟ ಮಾಡಿದ್ದಾನೆ.
ಮೊದಲು ಇಬ್ಬರ ಮೇಲೆ ಹಲ್ಲೆ ನಡೆಸಿ ಬಳಿಕ ಕಟ್ಟಡದ ಮೇಲೆ ಏರಿ ಪಕ್ಕದಲ್ಲೇ ಇದ್ದ ಕರೆಂಟ್ ಕಂಬದಲ್ಲಿರುವ ವಿದ್ಯುತ್ ತಂತಿ ಹಿಡಿದುಕೊಳ್ಳಲು ಯತ್ನಿಸಿದ್ದಾನೆ. ಘಟನಾ ಸ್ಥಳಕ್ಕೆ ಬಂದ ಜಿಗಣಿ ಪೊಲೀಸರು, ತಕ್ಷಣ ಕರೆಂಟ್ ಆಫ್ ಮಾಡಿದ್ದಾರೆ. ಆತನನ್ನು ರಕ್ಷಿಸಲು ಸಿಬ್ಬಂದಿ ಕಟ್ಟಡದ ಮೇಲೆ ಹತ್ತುತ್ತಿದ್ದಂತೆ ಆತ ತಂತಿ ಮೂಲಕ ವಿದ್ಯುತ್ ಕಂಬವನ್ನು ಏರಿ ಕುಳಿತಿದ್ದಾನೆ. ಸದ್ಯ ವ್ಯಕ್ತಿಯ ಮನವೊಲಿಕೆ ಮಾಡಿ ಹಗ್ಗದ ಮೂಲಕ ಆತನನ್ನು ಕೆಳಗಿಳಿಸಲಾಗಿದೆ.