ಹೈದರಾಬಾದ್: ಮಹಿಳೆಯೊಬ್ಬರು ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಕಚೇರಿ ಎದುರಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಆಂಧ್ರ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಕಚೇರಿ ಎದುರು ಈ ಘಟನೆ ನಡೆದಿದೆ. ವೈ ಎಸ್ ಆರ್ ಕಾಂಗ್ರೆಸ್ ತಮ್ಮ ಭೂಮಿಯನ್ನು ಕಬಳಿಸಿದೆ ಎಂದು ಆರೋಪಿಸಿ ಮಹಿಳೆ ಕಟ್ಟದದ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಕ್ಷಣ ಪೊಲಿಸರು ಮಹಿಳೆಯನ್ನು ರಕ್ಷಿಸಿದ್ದಾರೆ.
ಶ್ರೀಕಾಕುಳಂ ಜಿಲ್ಲೆಯ ನಿವಾಸಿ ದುರ್ಗಾದೇವಿ ಕ್ಯಾಂಪ್ ಆಫೀಸ್ ಬಳಿಯ ಕಟ್ಟಡವನ್ನು ಏರಿ ಕಟ್ಟಡದಿಂದ ಜಿಗಿಯಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ. ಶ್ರೀಕಾಕುಳಂ ನಲ್ಲಿ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ನಾಯಕರು ತನ್ನ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿ ಭೂಮಿ ಬಿಟ್ಟುಕೊಡುವಂತೆ ಕೇಳಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಬೇರೆ ದಾರಿಯಿಲ್ಲದೇ ಆತ್ಮಹತ್ಯೆಗೆ ನಿರ್ಧರಿಸಿದ್ದಾಗಿ ಮಹಿಳೆ ಕಣ್ಣೀರಿಟ್ಟಿದ್ದಾರೆ.
ವೈ ಎಸ್ ಆರ್ ಪಿ ಪಕ್ಷದ ನಾಯಕರ ವಿರುದ್ಧ ಭೂ ಕಬಳಿಕೆ ಆರೋಪ ಕೇಳಿಬಂದಿದ್ದು, ಇತ್ತೀಚೆಗೆ ಗುಂಟೂರಿನ ಕಚೇರಿಯನ್ನು ತೆರವುಗೊಳಿಸಲಾಗಿತ್ತು. ಇದೇ ವೇಳೆ ವಿಶಾಖಪಟ್ಟಣಂ ನಲ್ಲ್ಲಿ ಎರಡು ಕಚೇರಿಗಳಿಗೆ ನೀಟೀಸ್ ನೀಡಲಾಗಿದೆ.