ವಿಜಯವಾಡ: ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮಹಿಳೆಯೊಬ್ಬರು ತಮ್ಮ ಮೃತ ಪತಿಯ ನೆನಪಿಗಾಗಿ ದೇವಸ್ಥಾನ ನಿರ್ಮಿಸಿದ್ದಾರೆ. ತನ್ನ ಜೀವನದುದ್ದಕ್ಕೂ ಪತಿಯನ್ನು ದೇವರಾಗಿ ಪರಿಗಣಿಸಿರುವ ಇವರು, ವಿಗ್ರಹಕ್ಕೆ ಪ್ರತಿದಿನ ಪ್ರಾರ್ಥನೆ ಸಲ್ಲಿಸುತ್ತಾರೆ.
ಸಂಪ್ರದಾಯವಾದಿ ಕುಟುಂಬದಲ್ಲಿ ಬೆಳೆದಿದ್ದ ಪದ್ಮಾವತಿ ಎಂಬ ಮಹಿಳೆಯ ಪತಿ ಅಂಕಿರೆಡ್ಡಿಯವರು ನಾಲ್ಕು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಪತಿ ಮರಣದ ಬಳಿಕ ಪದ್ಮಾವತಿ ಜರ್ಜರಿತರಾಗಿದ್ದರು. ಈಕೆಯ ಕನಸಿನಲ್ಲಿ ಪತಿ ಕಾಣಿಸಿಕೊಂಡು ತನಗಾಗಿ ದೇವಾಲಯ ನಿರ್ಮಿಸಿಕೊಡುವಂತೆ ಕೇಳಿಕೊಂಡರಂತೆ. ಹೀಗಾಗಿ ಪತಿಯ ನೆನಪಿಗಾಗಿ ಪದ್ಮಾವತಿ ದೇವಸ್ಥಾನ ನಿರ್ಮಿಸಿದ್ದಾರೆ.
ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 2439 ಪ್ಯಾರಾಮೆಡಿಕಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಪದ್ಮಾವತಿ ಚಿಕ್ಕವಳಿರಬೇಕಾದರೆ ತನ್ನ ತಾಯಿಯು ತಂದೆಯನ್ನು ಪೂಜಿಸುವುದನ್ನು ನೋಡುತ್ತಾ ಬೆಳೆದರು. ತಾನು ಮದುವೆಯಾದ ಬಳಿಕ ತನ್ನ ತಾಯಿ ಮಾಡುತ್ತಿದ್ದ ಹಾಗೆಯೇ ಅನುಕರಿಸಿದ್ದಾರೆ. ದೇವಸ್ಥಾನದಲ್ಲಿ ತನ್ನ ಪತಿಯ ಅಮೃತಶಿಲೆಯ ವಿಗ್ರಹ ಸ್ಥಾಪಿಸಿ ಪ್ರತಿದಿನ ಪೂಜಿಸುತ್ತಾರೆ. ಅಂಕಿರೆಡ್ಡಿ ಜನ್ಮದಿನದಂದು ಮೂರ್ತಿಗೆ ಅಭಿಷೇಕ ಮಾಡುತ್ತಾರೆ. ಅಲ್ಲದೆ ಪ್ರತಿ ಹುಣ್ಣಿಮೆಯಂದು ಬಡವರಿಗೆ ಉಚಿತ ಆಹಾರ ವಿತರಿಸುತ್ತಾರೆ. ಈಕೆಯ ಪುತ್ರ ಶಿವಶಂಕರ ರೆಡ್ಡಿ ಹಾಗೂ ಪತಿ ಸ್ನೇಹಿತ ತಿರುಪತಿ ರೆಡ್ಡಿ ದೇವಾಲಯದ ಸೇವೆಯಲ್ಲಿ ನಿರತರಾಗಿದ್ದಾರೆ.