ವಿಜಯವಾಡ: ನಮ್ಮ ದೇಶದಲ್ಲಿ ಋತುಚಕ್ರದ ಬಗ್ಗೆ ಇನ್ನೂ ಮೌಢ್ಯತೆಯಿದೆ. ಮುಟ್ಟಾದರೆ ಹೆಣ್ಣು ಮೈಲಿಗೆ ಎಂದು ಮನೆಯಿಂದ ಹೊರಗಿಡುವ ಪ್ರಕ್ರಿಯೆ ಇನ್ನೂ ಹಲವೆಡೆ ಚಾಲ್ತಿಯಲ್ಲಿದೆ. ಹೀಗಾಗಿ ಈ ಬಗ್ಗೆ ಜಾಗೃತಿ ಮೂಡಿಸಲು ಅನೇಕರು ಶ್ರಮಿಸುತ್ತಿದ್ದಾರೆ. ಇವರಲ್ಲಿ ಆಂಧ್ರಪ್ರದೇಶದ 18 ವರ್ಷದ ಹುಡುಗ ಸೋಹನ್ ಪಪ್ಪು ಕೂಡ ಒಬ್ಬರು.
ಹೌದು, ಬಿಬಿಎ ವಿದ್ಯಾರ್ಥಿಯಾಗಿರುವ ಸೋಹನ್, ಋತುಚಕ್ರದ ಬಗ್ಗೆ ಜನಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸುವುದು ಮತ್ತು ಸಮಾಜದಲ್ಲಿ ಕಡಿಮೆ ಸವಲತ್ತು ಹೊಂದಿರುವ ಹೆಣ್ಮಕ್ಕಳಿಗೆ ಸಹಾಯ ಮಾಡುವ ನಿರ್ಧಾರವನ್ನು ಈ ಹದಿಹರೆಯದ ಹುಡುಗ ತೆಗೆದುಕೊಂಡಿದ್ದಾನೆ.
ಮುಟ್ಟಾದ ಮಹಿಳೆಯರಿಗಾಗಿ ಜೈವಿಕ ವಿಘಟನೀಯ ಸ್ಯಾನಿಟರಿ ಪ್ಯಾಡ್ ತಯಾರಿಸಿದ್ದಾನೆ. ಈ ಬಗ್ಗೆ ಸಂಶೋಧನೆ ನಡೆಸಿದ ಸೋಹನ್ ಮತ್ತು ತಂಡ, ಬಿದಿರಿನ ನಾರು, ಬಾಳೆಹಣ್ಣಿನ ನಾರು ಮತ್ತು ತಿರುಳು, ಕಾರ್ನ್ ಸ್ಟಾರ್ಚ್ ಪ್ಲಾಸ್ಟಿಕ್ ನಂತಹ ಮೂರು ವಸ್ತುಗಳಿಂದ ಈ ಪ್ಯಾಡ್ ತಯಾರಿಸಿದ್ದಾರೆ. ಇವು ನೂರು ಪ್ರತಿಶತ ಜೈವಿಕ ವಿಘಟನೀಯ ಎಂದು ಸೋಹನ್ ತಿಳಿಸಿದ್ದಾರೆ.
ಭಯೋತ್ಪಾದಕರ ದಾಳಿಯಲ್ಲಿ ಸೇನಾ ನಾಯಕ ಸೇರಿ ಪಾಕಿಸ್ತಾನದ 12 ಯೋಧರ ಸಾವು
ಸೋಹನ್ 9ನೇ ತರಗತಿಯಲ್ಲಿರುವಾಗಲೇ ಕಷ್ಟದಲ್ಲಿರುವ ಜನರಿಗೆ ಅಗತ್ಯ ಸಹಾಯ ಮಾಡುತ್ತಿದ್ದ. ಅಲ್ಲದೆ ಮುಟ್ಟಿನ ನೈರ್ಮಲ್ಯಕ್ಕಾಗಿ ಶಾಲೆ ಮತ್ತು ಇತರೆಡೆ ಅಭಿಯಾನ ಶುರು ಮಾಡಿದ್ದ. ಮೊದಲಿಗೆ ಮಹಿಳೆಯರಿಗೆ ಜನಪ್ರಿಯ ಉತ್ಪನ್ನಗಳ ಪ್ಯಾಡ್ ಗಳನ್ನು ಸೋಹನ್ ಮತ್ತು ಗೆಳೆಯರು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ವಿತರಿಸಿದರು. ಬಳಿಕ ಇದು ಆರೋಗ್ಯಕ್ಕೆ ಹಾನಿಕಾರಕ ಎಂದು ಅರಿತ ಈ ತಂಡ ಸ್ವತಃ ಜೈವಿಕ ವಿಘಟನೆಯ ಪ್ಯಾಡ್ ಗಳನ್ನು ತಯಾರಿಸಲು ಮುಂದಾಗಿ ಯಶಸ್ವಿಯಾಗಿದೆ.