alex Certify ಮದುವೆಗೆ ನಿರಾಕರಣೆ; ಗೆಳತಿಯನ್ನೇ ಹತ್ಯೆ ಮಾಡಿದ ಟೆಕ್ಕಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಗೆ ನಿರಾಕರಣೆ; ಗೆಳತಿಯನ್ನೇ ಹತ್ಯೆ ಮಾಡಿದ ಟೆಕ್ಕಿ..!

ಅಮರಾವತಿ: ಇತ್ತೀಚಿನ ದಿನಗಳಲ್ಲಿ ಮದುವೆ ನಿರಾಕರಿಸಿದರು ಅನ್ನೋ ಕಾರಣಕ್ಕೆ ಕೊಲೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದಕ್ಕೆ ಮತ್ತೊಂದು ಸೇರ್ಪಡೆ ಎನ್ನುವಂತೆ, ಟೆಕ್ಕಿಯೊಬ್ಬ ಗೆಳತಿಯನ್ನೇ ಕೊಲೆ ಮಾಡಿದ್ದಾನೆ.

ಈ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪೆದಕಕಣಿ ಮಂಡಲದ ತಕ್ಕೆಲ್ಲಪಾಡು ಗ್ರಾಮದಲ್ಲಿ ನಡೆದಿದೆ.

ಕೃಷ್ಣಾ ಜಿಲ್ಲೆಯ ವುಯ್ಯೂರು ಮಂಡಲದ ಕೃಷ್ಣಾಪುರಂ ಗ್ರಾಮದ 20 ವರ್ಷದ ತಪಸ್ವಿ ಮೃತ ಯುವತಿ. ವಿಜಯವಾಡ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಜ್ಞಾನೇಶ್ವರ್ ಕೊಲೆ ಮಾಡಿದವನು. 2 ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ತಪಸ್ವಿ ಹಾಗೂ ಜ್ಞಾನೇಶ್ವರ್ ಪರಿಚಯವಾಗಿದೆ. ಪರಿಚಯವಾದ ನಂತರ ಜ್ಞಾನೇಶ್ವರ್ ಗೆ ಸಲುಗೆ ಬೆಳೆದಿದೆ. ಹೀಗಾಗಿ ಇತ್ತೀಚೆಗೆ ತಪಸ್ವಿಯನ್ನು ಜ್ಞಾನೇಶ್ವರ್ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದನಂತೆ.

ಆದರೆ ತಪಸ್ವಿ ಇದಕ್ಕೆ ನಿರಾಕರಿಸಿದ್ದಳಂತೆ. ಮತ್ತೆ ಆಕೆಯನ್ನು ಮದುವೆಗೆ ಒಪ್ಪಿಸಲು ಹೋದ ಜ್ಞಾನೇಶ್ವರ್ ಅವಳ ಜೊತೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಇರಿದಿದ್ದಾನೆ‌. ಈ ವೇಳೆ ಆಕೆಯ ಗೆಳತಿ ಇದನ್ನು ನೋಡಿ ಭಯದಿಂದ ಹೊರಗೆ ಹೋಗಿ ಕೂಗಾಡಿದ್ದಾಳೆ.

ಈ ವೇಳೆ ತಪಸ್ವಿ ಕೂಡ ಹೊರ ಹೋಗಲು ಪ್ರಯತ್ನ ಮಾಡಿದ ಹಿನ್ನೆಲೆಯಲ್ಲಿ ಆಕೆಯನ್ನು ಕೂಡಿ ಹಾಕಿದ್ದಾನೆ ಈ ಟೆಕ್ಕಿ. ನಂತರ ಆಕೆಯ ಮುಂದೆಯೇ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇನ್ನು ಈ ವಿಚಾರ ತಿಳಿದ ಅಕ್ಕಪಕ್ಕದವರು ಮನೆಗೆ ಬಂದು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇನ್ನು ಈ ಪಾಪಿ ಟೆಕ್ಕಿಯನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ತಪಸ್ವಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...