ನೀರಿನಲ್ಲಿ ಮುಳುಗಿ ಬೆಂಗಳೂರು ಮೂಲದ ನಾಲ್ವರು ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ವೆಲಿಗಲ್ಲು ಪ್ರಾಜೆಕ್ಟ್ ಸಮೀಪ ನಡೆದಿದೆ.
ಬೆಂಗಳೂರು ಮೂಲದ ತಾಜ್ ಮೊಹಮ್ಮದ್, ಮೊಹಮ್ಮದ್, ಉಸ್ಮಾನ್ ಖಾನಂ ಹಾಗೂ ಮೊಹಮ್ಮದ್ ಹಫೀಸ್ ಅವರು ನೀರುಪಾಲಾದವರು ಎಂದು ಹೇಳಲಾಗಿದೆ. ವೆಲಿಗಲ್ಲು ಪ್ರಾಜೆಕ್ಟ್ ಪ್ರದೇಶಕ್ಕೆ ಪ್ರವಾಸಕ್ಕೆ ತೆರಳಿದ್ದ ವೇಳೆ ಅವಘಡ ಸಂಭವಿಸಿದೆ.
ಚಿತ್ತೂರಿನ ಸಂಬಂಧಿಕರ ಮನೆಗೆ ಇವರು ಹೋಗಿದ್ದರು. ಅಲ್ಲಿಂದ ಬೆಂಗಳೂರಿನ 10 ಜನ ಮತ್ತು ಚಿತ್ತೂರಿನ 10 ಜನ ಪ್ರವಾಸಕ್ಕೆ ತೆರಳಿದ್ದರು. ಲಕ್ಕಿರೆಡ್ಡಿಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.