alex Certify ಆಂಧ್ರಪ್ರದೇಶ ರೈಲು ದುರಂತ ಪ್ರಕರಣ: ಅಪಘಾತದ ಹಿಂದಿನ ಕಾರಣ ಬಹಿರಂಗ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಂಧ್ರಪ್ರದೇಶ ರೈಲು ದುರಂತ ಪ್ರಕರಣ: ಅಪಘಾತದ ಹಿಂದಿನ ಕಾರಣ ಬಹಿರಂಗ….!

ಆಂಧ್ರಪ್ರದೇಶದಲ್ಲಿ ಸಂಭವಿಸಿದ ರೈಲು ದುರಂತಕ್ಕೆ ಲೋಕೋ ಪೈಲಟ್​ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದ್ದು ಕೆಂಪು ಸಿಗ್ನಲ್​ ಜಂಪ್​ ಮಾಡಿದ ಹಿನ್ನೆಲೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ರೈಲ್ವೆ ಸಚಿವಾಲಯದ ಮೂಲಗಳು ತಿಳಿಸಿವೆ.

ಆಂಧ್ರ ಪ್ರದೇಶದ ವಿಜಯನಗರ ಜಿಲ್ಲೆಯ ಕೊತವಲಸ ರೈಲು ನಿಲ್ದಾಣದ ಬಳಿ ವಿಶಾಖಪಟ್ಟಣಂ – ಪಲಾಸ ಪ್ಯಾಸೆಂಜರ್​ ರೈಲಿಗೆ ಡಿಕ್ಕಿ ಹೊಡೆದ ವಿಶಾಖಪಟ್ಟಣಂನಿಂದ ರಾಯಗಡಕ್ಕೆ ಪ್ರಯಾಣಿಸುತ್ತಿದ್ದ ರೈಲು ಹಳಿ ತಪ್ಪಿದ ಪರಿಣಾಮ 10 ಕ್ಕೂ ಅಧಿಕ ಪ್ರಯಾಣಿಕರು ಸಾವನ್ನಪ್ಪಿ ಅನೇಕರು ಗಾಯಗೊಂಡಿದ್ದರು.

ಜೂನ್​ 2ರಂದು ಓಡಿಶಾದ ಬಾಲಸೋರ್​ನಲ್ಲಿ ಕೋರಮಂಡಲ್​ ಎಕ್ಸ್​ಪ್ರೆಸ್​ ಸರಕು ರೈಲಿಗೆ ಡಿಕ್ಕಿ ಹೊಡೆದ ಬಳಿಕ ನಡೆದ ಮೂರನೇ ರೈಲು ದುರಂತ ಇದಾಗಿದೆ. ಆ ದುರಂತದಲ್ಲಿ 296 ಮಂದಿ ಜೀವ ಕಳೆದುಕೊಂಡಿದ್ದರು ಹಾಗೂ 1200 ಮಂದಿ ಗಾಯಗೊಂಡಿದ್ದರು. ಅಕ್ಟೋಬರ್​ 11ರಂದು ಬಿಹಾರದ ಬಕ್ಸರ್​ನಲ್ಲಿ ದೆಹಲಿಯ ಎಕ್ಸ್​ಪ್ರೆಸ್​ ಹಳಿ ತಪ್ಪಿದ ಪರಿಣಾಮ ಐವರು ಸಾವನ್ನಪ್ಪಿದ್ದರು ಹಾಗೂ 30 ಮಂದಿ ಗಾಯಗೊಂಡಿದ್ದರು. ವಿಶಾಖಪಟ್ಟಣಂ-ಪಲಾಸ ರೈಲು ಮುಖ್ಯ ಹಳಿಯಿಂದ ಸೈಡ್ ಟ್ರ್ಯಾಕ್‌ಗೆ ಬದಲಾಯಿಸುವಾಗ ಭಾನುವಾರ ಅಪಘಾತ ಸಂಭವಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...