ಹೈದರಾಬಾದ್: ದೇಶದಲ್ಲಿ ವಕ್ಫ್ ಬೋರ್ಡ್, ವಕ್ಫ್ ಮಸೂದೆಗಳ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಆಂಧ್ರಪ್ರದೇಶ ಸರ್ಕಾರ ವಕ್ಫ್ ಬೋರ್ಡ್ ನ್ನು ವಜಾಗೊಳಿಸಿದೆ.
ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ನೇತೃತ್ವದ ಎನ್ ಡಿಎ ಸರ್ಕಾರ ವಕ್ಫ್ ಮಂಡಳಿಯನ್ನು ವಿಸರ್ಜನೆಗೊಳಿಸಿದೆ ಎಂದು ತಿಳಿದುಬಂದಿದೆ. ಇದೇ ವೇಳೆ ರಾಜ್ಯದಲ್ಲಿ ವಕ್ಫ್ ಬೋರ್ಡ್ ಆಸ್ತಿಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಶೀಘ್ರದಲ್ಲಿಯೇ ನೂತನ ವಕ್ಫ್ ಮಂಡಳಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ. ಹಿಂದಿನ ಜಗನ್ ಮೋಹನ್ ಸರ್ಕಾರ ವಕ್ಫ್ ಬೋರ್ಡ್ ಸ್ಥಾಪಿಸುವಾಗ ಜೆವಿ47 ನ್ನು ಹೊರತುಪಡಿಸಿತ್ತು. ಇದರಿಂದ ವಕ್ಫ್ ಆಸ್ತಿಯಲ್ಲಿ ಅವ್ಯವಹಾರ ನಡೆದಿರುವುದು ಕಂಡುಬಂದಿತ್ತು. ಇದರಿಂದ ವಕ್ಫ್ ಬಿಲ್ ರದ್ದುಪಡಿಸಲಾಗಿತ್ತು. ಇದೀಗ ವಕ್ಫ್ ಮಂಡಳಿಯನ್ನು ವಿಸರ್ಜಿಸಲಾಗಿದ್ದು, ಶೀಘ್ರದಲ್ಲಿಯೇ ಹೊಸ ಮಂಡಳಿ ರಚನೆಯಾಗಲಿದೆ ಎಂದು ತಿಳಿದುಬಂದಿದೆ.