
ಅನಂತಪುರ ಜಿಲ್ಲೆಯ ಪೆನಕಚೆರ್ಲ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೆಹಬೂಬಿ ಎಂಬಾಕೆ ವಾಸಿಸುತ್ತಿದ್ದ ಜಾಗ ತನಗೆ ಸೇರಿದ್ದು ಎಂದು ಆಕೆಯ ಸಹೋದರ ಜಿಲಾನಿ ಆಗಾಗ ಜಗಳ ತೆಗೆಯುತ್ತಿದ್ದ ಎನ್ನಲಾಗಿದೆ.
ಈ ವಿವಾದ ಇತ್ತೀಚೆಗೆ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಜಿಲಾನಿ ಕೊಡಲಿಯಿಂದ ತನ್ನ ಹಿರಿಯ ಸಹೋದರಿ ಮೆಹಬೂಬಿ ಮೇಲೆ ಹಲ್ಲೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಇತರರು ಕಿರುಚಿಕೊಂಡರೂ ಸಹ ಆತ ಲೆಕ್ಕಿಸಿಲ್ಲ.
ಆಕೆಯ ಕಾಲಿಗೆ, ಬೆನ್ನಿಗೆ ಕೊಡಲಿಯಿಂದ ಜಿಲಾನಿ ಹೊಡೆದಿದ್ದು, ತಪ್ಪಿಸಿಕೊಳ್ಳಲು ಎಷ್ಟೇ ಯತ್ನಿಸಿದರೂ ಬಿಟ್ಟಿಲ್ಲ. ಕೊನೆಗೂ ಆತನನ್ನು ಕೆಳಕ್ಕೆ ಬೀಳಿಸಿ ಕೊಡಲಿ ಕಿತ್ತುಕೊಂಡಿದ್ದು, ಅಷ್ಟರಲ್ಲಾಗಲೇ ಮೆಹಬೂಬಿ ಸಾಕಷ್ಟು ಗಾಯಗೊಂಡಿದ್ದಳು.
ಸ್ಥಳದಲ್ಲಿದ್ದವರೊಬ್ಬರು ತಮ್ಮ ಮೊಬೈಲ್ ನಲ್ಲಿ ಈ ಹಲ್ಲೆಯ ದೃಶ್ಯವನ್ನು ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಮೆಹಬೂಬಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.