ನವದೆಹಲಿ: ಆಂಧ್ರಪ್ರದೇಶ ಸರ್ಕಾರ ರಾಜ್ಯದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆಯನ್ನು 13 ರಿಂದ 26 ಕ್ಕೆ ಹೆಚ್ಚಳ ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸಿದೆ
ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸಂಪುಟ ಮಂಗಳವಾರದಂದು ರಾಜ್ಯದಲ್ಲಿ ಜಿಲ್ಲೆಗಳ ಸಂಖ್ಯೆ ಹೆಚ್ಚಳಕ್ಕೆ ಒಪ್ಪಿಗೆ ನೀಡಿತ್ತು.
ರಾಜ್ಯದ ಕ್ಯಾಬಿನೆಟ್ ನಿಂದ ಹೊಸ ಜಿಲ್ಲೆಗಳ ರಚನೆಯನ್ನು ಅಂತಿಮಗೊಳಿಸಿದ ನಂತರ, ಆಂಧ್ರಪ್ರದೇಶ ಸರ್ಕಾರ AP ಜಿಲ್ಲೆಗಳ ರಚನೆ ಕಾಯಿದೆ, ವಿಭಾಗದ 3(5) ಅಡಿಯಲ್ಲಿ ಹೊಸ ಜಿಲ್ಲೆ ರಚಿಸಲಾಗಿದೆ.
ಕೆಲವು ಜಿಲ್ಲೆಗಳನ್ನು ಮರುನಾಮಕರಣ ಮಾಡಲಾಗಿದೆ ಹೊಸ ಕೇಂದ್ರ ಕಚೇರಿಯನ್ನು ನಿಯೋಜಿಸಲಾಗಿದೆ. ಆಂಧ್ರಪ್ರದೇಶದ ಹೊಸ ಜಿಲ್ಲೆಗಳನ್ನು ರಾಜ್ಯದಲ್ಲಿನ ಸಂಸದೀಯ ಕ್ಷೇತ್ರಗಳ ಆಧಾರದ ಮೇಲೆ ರಚಿಸಲಾಗಿದೆ.
ಸಂಸದೀಯ ಕ್ಷೇತ್ರಗಳ ಆಧಾರದ ಮೇಲೆ ಹೊಸ ಜಿಲ್ಲೆಗಳನ್ನು ರಚಿಸುವುದು ಸಿಎಂ ಜಗನ್ ರೆಡ್ಡಿ ಅವರ ಬಹುನಿರೀಕ್ಷಿತ ಭರವಸೆಯಾಗಿದೆ. ವೈಎಸ್ಆರ್ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಆಡಳಿತಾತ್ಮಕ ಅನುಕೂಲಕ್ಕಾಗಿ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಹೊಸ ಜಿಲ್ಲೆಗಳನ್ನು ರಚಿಸುವುದಾಗಿ ಹೇಳಿತ್ತು.
ಅಧಿಸೂಚನೆಯಂತೆ ಪೂರ್ವ ಗೋದಾವರಿ ಜಿಲ್ಲೆಯನ್ನು ಮೂರು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ, ಪಶ್ಚಿಮ ಗೋದಾವರಿ ಜಿಲ್ಲೆಯನ್ನು ಎರಡು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ, ಕೃಷ್ಣ ಜಿಲ್ಲೆಯನ್ನು ಎರಡು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ, ಗುಂಟೂರು ಜಿಲ್ಲೆಯನ್ನು ಮೂರು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ, ಕರ್ನೂಲ್ ಜಿಲ್ಲೆಯನ್ನು ಎರಡು ಜಿಲ್ಲೆಗಳಾಗಿ ವಿಭಜಿಸಲಾಗಿದೆ. ಚಿತ್ತೂರ್ ಅನ್ನು ಎರಡು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ.