ಆಂಧ್ರ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದ ಭಾರಿ ಪ್ರವಾಹ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಉಚಿತವಾಗಿ ಪಡಿತರ ಹಂಚಿಕೆ ಮಾಡಲಾಗುತ್ತದೆ. ನೆರೆ ಸಂತ್ರಸ್ಥರಿಗೆ ಉಚಿತವಾಗಿ ಪಡಿತ ಹಂಚಿಕೆ ಮಾಡಲು ಆಂಧ್ರ ಸರ್ಕಾರ ತೀರ್ಮಾನ ಕ್ರಮಕೈಗೊಂಡಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ನಾಲ್ಕು ಜಿಲ್ಲೆಗಳಲ್ಲಿ ಪ್ರವಾಹದಿಂದಾಗಿ ಜನ ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಂಧ್ರದ ಚಿತ್ತೂರು, ನೆಲ್ಲೂರು, ಕಡಪ, ಅನಂತಪುರ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು, ಈ ಜಿಲ್ಲೆಗಳಲ್ಲಿ ಉಚಿತವಾಗಿ ರೇಷನ್ ವಿತರಿಸಲಾಗುತ್ತದೆ. ಸಂತ್ರಸ್ಥ ಪ್ರತಿ ಕುಟುಂಬಕ್ಕೆ 25 ಕೆಜಿ ಅಕ್ಕಿ, ತಲಾ ಒಂದು ಕೆಜಿ ಅಡುಗೆ ಎಣ್ಣೆ, ಬೇಳೆ, ಈರುಳ್ಳಿ, ಕೆಜಿ ಆಲೂಗಡ್ಡೆ ಇತರೆ ವಸ್ತುಗಳನ್ನು ಉಚಿತವಾಗಿ ಪೂರೈಕೆ ಮಾಡುವಂತೆ ಸಿಎಂ ನಿರ್ದೇಶನ ನೀಡಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಉಚಿತವಾಗಿ ಅಗತ್ಯ ವಸ್ತುಗಳನ್ನು ವಿತರಿಸಲು ಆದೇಶಿಸಲಾಗಿದೆ. ನೆರೆಹಾನಿ ಪ್ರದೇಶಗಳ ಉಸ್ತುವಾರಿ ಸಚಿವರು, ಜಿಲ್ಲಾ ಸಚಿವರು ಮತ್ತು ಶಾಸಕರಿಗೆ ಪರಿಸ್ಥಿತಿ ಅವಲೋಕನ ಮಾಡುವಂತೆ ಈಗಾಗಲೇ ಸಿಎಂ ಮನವಿ ಮಾಡಿದ್ದಾರೆ. ಶಾಸಕರು ವಿಧಾನಸಭೆಗೆ ಬರುವ ಅಗತ್ಯವಿಲ್ಲ. ನೆರೆ ಹಾನಿ ಪ್ರದೇಶದಲ್ಲಿ ಪರಿಶೀಲನೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಬೆಳೆ ಹಾನಿ ಪ್ರದೇಶದಲ್ಲಿ ರೈತರಿಗೆ ಬಿತ್ತನೆ ಬೀಜ ಅಗತ್ಯವಿದ್ದರೆ ಉಚಿತವಾಗಿ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.